ಶಿವಮೊಗ್ಗ : ನಟ ಸುದೀಪ್ ವಿರುದ್ದ ನಮಗೆ ದೂರು ಬಂದಿದೆ. ಈ ದೂರನ್ನು ಕಮಿಷನರ್ ಅವರಿಗೆ ಕಳುಹಿಸಿದ್ದೇನೆ. ಅವರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
ಜಿಲ್ಲೆಯ ಎರಡು ದಿನದ ಪ್ರವಾಸ ಕೈಗೊಂಡಿರುವ ಇವರು ಮೊದಲನೇ ದಿನ ಶಿವಮೊಗ್ಗ ಮೆಗ್ಗಾನ್ ಭೋಧಾನಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಬಿಗ್ಬಾಸ್ ನಿರೂಪಣೆ ವೇಳೆ ನಟ ಸುದೀಪ್ ಮಾತನಾಡಿದ್ದಾರೆ ಎನ್ನಲಾದ ವಿಚಾರವಾಗಿ ಮಹಿಳಾ ಆಯೋಗಕ್ಕೆ ದೂರು ಬಂದ ಕುರಿತು ನಾಗಲಕ್ಷ್ಮಿ ಚೌಧರಿ ಪ್ರತಿಕ್ರಿಯೆ ನೀಡಿದರು. ನಟ ಸುದೀಪ್ ವಿರುದ್ದ ಬಂದ ದೂರನ್ನು ಆಯುಕ್ತರಿಗೆ ಕಳುಹಿಸಿದ್ದೇನೆ ಎಂದರು.ನಾನು ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಭೇಟಿ ನೀಡಿದ್ದೇನೆ. ಸಾಕಷ್ಟು ತಾಯಂದಿರ ಹತ್ತಿರ ಮಾತನಾಡಿದ್ದೇನೆ. ಡೆಲಿವರಿ ವಿಭಾಗದಲ್ಲಿ ಹಾಗೂ ತಾಯಿ ಮಗುವಿನ ವಾರ್ಡ್ನಲ್ಲಿ ದುಡ್ಡು ಕೇಳುವುದು ಸಹಜ ಎಂಬ ಮಾತನ್ನು ನಾವು ಕೇಳಿ ಪಡೆಯುತ್ತೇವೆ. ಹಾಗಾಗಿ, ನಾನು ಪ್ರತಿಯೊಂದು ಪೇಷೆಂಟ್ ಜೊತೆ ಮಾತನಾಡುತ್ತೇನೆ. ಮಗು ತಂದು ಕೊಟ್ಟಾಗ ದುಡ್ಡು ತೆಗೆದುಕೊಳ್ಳುತ್ತಾರಾ? ಎಂದು ಕೇಳಿದ್ದೇನೆ. ಅದಕ್ಕೆ ಒಳಗಿನ ಎಲ್ಲಾ ಪೇಷೆಂಟ್ಗಳು ನಾವು ಯಾರೂ ದುಡ್ಡು ಕೊಡಲಿಲ್ಲ ಎಂದಿದ್ದಾರೆ. ಆದರೆ, ಆಚೆಕಡೆ ಗಂಡು ಮಗುವಿಗೆ 2,500 ಹಾಗೂ ಹೆಣ್ಣು ಮಗುವಿಗೆ 1,500 ರೂ ನೀಡಬೇಕೆಂದು ಹೇಳಿದ್ರು. ಆದರೆ, ನಾನು ಪೇಷಂಟ್ಗಳನ್ನು ಕೇಳಿದಾಗ ಯಾರೂ ಹೇಳಲಿಲ್ಲ ಎಂದಿದ್ದಾರೆ.
Laxmi News 24×7