ಬೆಳಗಾವಿ :ರಾಣಿ ಚನ್ನಮ್ಮ ವಿವಿಯ 14ನೇ ಘಟಿಕೋತ್ಸವವನ್ನು ನ.25 ರಂದು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಜರುಗಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದ್ದೇವೆ ಎಂದು ರಾಣಿ ಚನ್ನಮ್ಮ ವಿವಿಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ತಿಳಿಸಿದರು.
ಸೋಮವಾರ ಬೆಳಗಾವಿ ವಾರ್ತಾ ಇಲಾಖೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಸಮಾಜ ಸೇವೆಯಲ್ಲಿ ಶಿವಾಜಿ ಕಾಣಿಕರ, ಶಿಕ್ಷಣ ಮತ್ತು ಸಮಾಜ ಸೇವೆಯಲ್ಲಿ ಸುರೇಂದ್ರ ದೊಡ್ಡಣವರ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ಬಸವರಾಜ ಯಲಿಗಾರ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತಿದೆ ಎಂದರು.
ರಾಣಿ ಚನ್ನಮ್ಮ ವಿವಿಯ 14ನೇ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಆಗಮಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಪಿ.ಸುಧಾಕರ ಆಗಮಿಸಲಿದ್ದಾರೆ. ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್.ಕಿರಣಕುಮಾರ ಘಟಿಕೋತ್ಸದ ಭಾಷಣ ಮಾಡಲಿದ್ದಾರೆ. ಒಟ್ಟು ಪದವಿಗೆ ಅರ್ಹರಾದ ವಿದ್ಯಾರ್ಥಿಗಳು 38,485, 36,642 ಸ್ನಾತಕ ವಿದ್ಯಾರ್ಥಿಗಳು ಮತ್ತು 1,843 ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿಗಳು ರ್ಯಾಂಕ್ ವಿಜೇತರಾಗಿದ್ದಾರೆ ಎಂದರು.
ರಾಣಿ ಚನ್ನಮ್ಮವಿವಿಯಲ್ಲಿ ಕಳೆದ 18 ತಿಂಗಳಲ್ಲಿ ಮೂರು ಘಟಿಕೋತ್ಸವ ಮಾಡಲಾಗಿದೆ. ಸ್ನಾತಕೋತ್ತರ ಫಲಿತಾಂಶ ಪ್ರಕಟಗೊಂಡು ಕೇವಲ 50 ದಿನದಲ್ಲಿ ಘಟಿಕೋತ್ಸವ ಮಾಡುತ್ತಿರುವುದು ಇದೇ ಮೊದಲ ವಿವಿ ಆಗಿದೆ ಎಂದರು.
ರಾಣಿ ಚನ್ನಮ್ಮ ವಿವಿಯಗೆ ಮುಂಬೈ ಐಐಟಿಯಿಂದ ಎಮರ್ಜಿಂಗ್ ಯೂನಿವರ್ಸಿಟಿ ಅವಾಡ್೯ ಪ್ರಶಸ್ತಿ ದೊರಕಿದೆ. ಹಿರೇಬಾಗೇವಾಡಿಯಲ್ಲಿ ವಿವಿಯ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷದಿಂದ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲಾಗುವುದು ಎಂದರು.
ರಾಷ್ಟ್ರದ ಪ್ರತಿಷ್ಠೆ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಶಿಕ್ಷಕರು ಇಲ್ಲದೆ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯ ಇಲ್ಲ ಈಗ ಇ – ವಿದ್ಯಾಲಯ 4,446, 1,20 ಸಾವಿರ ವಿದ್ಯಾರ್ಥಿಗಳು ಸೌಲಭ್ಯ ಪಡೆಯುತ್ತಿದ್ದಾರೆ. ಇ- ಆಫೀಸ್ ವಿಳಂಬವಿಲ್ಲದೆ ನಡೆಸಿದೆ ಎಂದರು.
ಕಳೆದ 2024ರಲ್ಲಿ ಪ್ರಧಾನ ಮಂತ್ರಿ ಉಚ್ಚತರ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಸಂಶೋಧನೆ, ಪ್ರಯೋಗಾಲಯಗಳು ಮತ್ತು ವಿವಿಯ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ರಾಣಿ ಚನ್ನಮ್ಮ ವಿವಿಗೆ ಬಿಡುಗಡೆಯಾಗಿದೆ ಎಂದರು.
72 ಎಕರೆ ಭೂತರಾಮಹಟ್ಟಿಯಲ್ಲಿ ರಾಚವಿಗೆ ಉಳಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ. ಅದಕ್ಕೆ ಸರಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು
ಸಂತೋಷ ಕಾಮಗೌಡ, ಸ್ವಪ್ನ, ನದಾಫ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
Laxmi News 24×7