ಎಸ್.ಸಿ/ಎಸ್.ಟಿ ಅನುದಾನದ ದುರ್ಬಳಕೆ ಬೇಡ; ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ಯಾಮರಾವ್ ಘಾಟಗೆ
ಶೀಘ್ರದಲ್ಲೇ ತಾಲೂಕಾ ಮಟ್ಟದಲ್ಲಿ ಸಂಘಟನೆ ಬಲಪಡಿಸಲು ಯತ್ನ
ಬೆಳಗಾವಿಯಲ್ಲಿ ಸಂಘಟನೆ ಬಲಪಡಿಸಲು ಪ್ರಯತ್ನ
ಸಿಎಂ ಸಿದ್ಧರಾಮಯ್ಯನವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಇರುವ ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಸದೇ, ಕೇವಲ ದಲಿತರ ಅಭಿವೃದ್ಧಿಗಾಗಿಯೇ ಬಳಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ಯಾಮರಾವ್ ಘಾಟಗೆ ಹೇಳಿದರು.
ಇಂದು ಬೆಳಗಾವಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು. ಸಂಘಟನೆಯನ್ನು ಗ್ರಾಮೀಣ ಮಟ್ಟ ಮತ್ತು ತಾಲೂಕಾಮಟ್ಟದಲ್ಲಿ ಬಲಪಡಿಸಲು ಪ್ರಯತ್ನಿಸಲಾಗುತ್ತಿದೆ.
ಬೆಳಗಾವಿಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಗುತ್ತಿದೆ. ಶೀಘ್ರದಲ್ಲೇ ಜಿಲ್ಲಾ ಪದಾಧಿಕಾರಿಗಳ ನೇಮಕವನ್ನು ಮಾಡಲಾಗುವುದು ಎಂದರು.
ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಇರುವ ಅನುದಾನವನ್ನು ಬೇರೆ ಯೋಜನೆಗಳಿಗೆ ಮುಖ್ಯಮಂತ್ರಿಗಳು ದುರ್ಬಳಕೆ ಮಾಡಬಾರದು. ಕೂಡಲೇ ಇದನ್ನ ಕೈಬಿಡಬೇಕು.
ಕೇವಲ ಈ ಅನುದಾನವನ್ನು ದಲಿತ ಅಭಿವೃದ್ಧಿ ಕಾರ್ಯಗಳಿಗೆ ಮಾತ್ರ ಬಳಸಿಕೊಳ್ಳಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೆಂಪಣ್ಣಾ ಸಾಗ್ಯ, ವೆಂಕಟೇಶಮೂರ್ತಿ, ಪ್ರಭು ಚಕ್ರವರ್ತಿ, ಪ್ರಭು ಮೆಗಳಮನಿ, ಶೋಭಾ ಕಟ್ಟಿಮನಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
Laxmi News 24×7