ಬೆಳಗಾವಿ: ಬಿಡಿಸಿಸಿ (BDCC) ಬ್ಯಾಂಕ್‌ನ ನಿರ್ದೇಶಕನಾಗಿ ಆಯ್ಕೆಯಾದ ಬಳಿಕ, ಆಡಳಿತ ಮಂಡಳಿಯ ಮೊದಲ ಸಭೆಯಲ್ಲಿ ಪಾಲ್ಗೊಂಡೆನು. ಈ ವಿಶೇಷ ಸಂದರ್ಭದಲ್ಲಿ ಬ್ಯಾಂಕ್‌ನ ಸಿಬ್ಬಂದಿ ಹಾಗೂ ಯೂನಿಯನ್ ವತಿಯಿಂದ ನೀಡಲಾದ ಆತ್ಮೀಯ ಗೌರವ ಸನ್ಮಾನವನ್ನು ಸ್ವೀಕರಿಸಿದೆ.
ಈ ಜವಾಬ್ದಾರಿಯುತ ಸ್ಥಾನದ ಮೂಲಕ ಬ್ಯಾಂಕ್‌ನ ಸಮೃದ್ಧಿ, ಪಾರದರ್ಶಕತೆ ಮತ್ತು ಜನಕೇಂದ್ರಿತ ಸೇವೆಗಾಗಿ ಮತ್ತಷ್ಟು ಬದ್ಧತೆಯಿಂದ ಕೆಲಸ ಮಾಡುವ ಸಂಕಲ್ಪವನ್ನು ಇದೇ ವೇಳೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕ್‌ನ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ, ಉಪಾಧ್ಯಕ್ಷರಾದ ಶ್ರೀ ರಾಜು ಕಾಗೆ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಬ್ಯಾಂಕ್‌ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Laxmi News 24×7