Breaking News

ಊಟಕ್ಕೆ ಸೇರುವುದೇ ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ: ಸಿಎಂ ಗರಂ

Spread the love

ಬೆಂಗಳೂರು: “ಊಟಕ್ಕೆ ಸೇರುವುದು ಅಪರಾಧ ಎನ್ನುವ ರೀತಿ ಆಡುತ್ತೀರಲ್ಲ” ಎಂದು ಸಿಎಂ ಸಿದ್ದರಾಮಯ್ಯ ಅವರು ಸಿಟ್ಟನ್ನು ಹೊರಹಾಕಿದ್ದಾರೆ.

ವಿಧಾನಸೌಧದಲ್ಲಿಂದು ಮಾತನಾಡಿದ ಅವರು, “ಊಟಕ್ಕೆ ನಾವು ಸೇರಲೇ ಬಾರದಾ?. ನನಗೆ ಅರ್ಥ ಆಗುತ್ತಿಲ್ಲ. ಬಿಜೆಪಿಯ ಮಾತು ಕೇಳಿ ಪ್ರಶ್ನೆ ಕೇಳಿದರೆ ಹೇಗೆ?. ಆಗಾಗ ಊಟಕ್ಕೆ ಸೇರುತ್ತಿರುತ್ತೇವೆ. ತಪ್ಪೇನು ಅದರಲ್ಲಿ. ಮತ್ತೆ ಏಕೆ ಅದನ್ನು ಕೇಳುತ್ತೀರ” ಎಂದು ಸಿಟ್ಟಿನಲ್ಲೇ ಮರು ಪ್ರಶ್ನಿಸಿದರು. ಇದೇ ವೇಳೆ ಸರ್ಕಾರಿ ಸ್ಥಳಗಳಲ್ಲಿ ಆರ್​ಎಸ್ಎಸ್ ನಿಷೇಧಿಸುವ ಸಂಬಂಧ ಪ್ರತಿಕ್ರಿಯೆ ನೀಡದೆ ತೆರಳಿದರು.

“ಬಹಳ ದಿನ ಆಗಿತ್ತು ಊಟಕ್ಕೆ ಸೇರಿ. ಹಾಗಾಗಿ ಒಂದು ಊಟ ಆಯೋಜನೆ ಮಾಡಿದ್ದೇವೆ. ಕ್ಯಾಬಿನೆಟ್​ ರೀ ಶಫಲ್​ ವಿಚಾರ ಅದ್ಯಾವುದು ಇಲ್ಲ. ಅದಕ್ಕೂ ಈ ಭೋಜನಕೂಟಕ್ಕೂ ಸಂಬಂಧ ಇಲ್ಲ” ಎಂದು ಈಗಾಗಲೇ ಸಿಎಂ ಸ್ಪಷ್ಟಪಡಿಸಿದ್ದಾರೆ.‌ ಆದರೆ ಸಿಎಂ ದಿಢೀರ್ ಸಚಿವರುಗಳಿಗೆ ಡಿನ್ನರ್ ಪಾರ್ಟಿ ಆಯೋಜಿಸಿರುವುದು ಹಲವು ವ್ಯಾಖ್ಯಾನಗಳನ್ನು ಹುಟ್ಟುಹಾಕಿದೆ.

ನವೆಂಬರ್​​ ಕ್ರಾಂತಿಯ ಸದ್ದು ಕೇಳಿ ಬರುತ್ತಿರುವ ಮಧ್ಯೆ ಕಾಂಗ್ರೆಸ್​​ನಲ್ಲಿ ಡಿನ್ನರ್​ ಸಭೆ, ಪ್ರತ್ಯೇಕ ಸಭೆಗಳು ಮತ್ತೆ ಗರಿಗೆದರಿದಂತೆ ಕಾಣುತ್ತಿದೆ. ‌ಬಿಹಾರ ಚುನಾವಣೆ ಬಳಿಕ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಎರಡೂವರೆ ವರ್ಷ ಮುಗಿಸಿರೋ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಬದಲಾವಣೆ ಆಗಲಿದೆ ಎಂಬ ಕೂಗು ಸದ್ದು ಮಾಡುತ್ತಿದೆ.‌

ಬಿಹಾರ ಚುನಾವಣೆ ನಂತರ ಸಂಪುಟ ಪುನಾರಚನೆ ಆಗಲಿದ್ದು, ಸಂಪುಟದ ಅರ್ಧದಷ್ಟು ಸಚಿವರು ಬದಲಾಗೋ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಸಚಿವರಾದ ಜಿ.ಪರಮೇಶ್ವರ್, ಹೆಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಸಭೆ ನಡೆಸಿರುವುದು ಮತ್ತೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.


Spread the love

About Laxminews 24x7

Check Also

ಶಾಸಕ ಭರಮಗೌಡ (ರಾಜು) ಕಾಗೆಗೆ ಒಲಿದು ಬಂದ ಅದೃಷ್ಟ

Spread the love  ಸಚಿವ ಸತೀಶ್ ಜಾರಕಿಹೊಳಿಯವರ ಮಧ್ಯಸ್ಥಿಕೆಯಲ್ಲಿ ನಡೆದ ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ- ಶಾಸಕ ಬಾಲಚಂದ್ರ ಜಾರಕಿಹೊಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ