ಮೈಸೂರು: ದಸರಾ ಮಹೋತ್ಸವದ ನಿಮಿತ್ತ 16 ನಾನಾ ಸಮಿತಿಗಳಿಗೆ ಅಧಿಕಾರೇತರರನ್ನು ಜಿಲ್ಲಾಡಳಿತ ನೇಮಕ ಮಾಡಿದೆ. ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಈ ಉಪ ಸಮಿತಿಗಳಲ್ಲಿ ಬರೋಬ್ಬರಿ 2219 ಸದಸ್ಯರಿದ್ದಾರೆ!
ದಸರಾ ಉಪ ಸಮಿತಿಗಳಿಗೆ ಅಧಿಕಾರಿ ವರ್ಗದವರನ್ನು ಉಪ ವಿಶೇಷಾಧಿಕಾರಿ, ಕಾರ್ಯಾಧ್ಯಕ್ಷರು, ಸಹ ಕಾರ್ಯಾಧ್ಯಕ್ಷರು, ಕಾರ್ಯದರ್ಶಿಯವರನ್ನು ನೇಮಕ ಮಾಡಿರುವ ಜಿಲ್ಲಾಡಳಿತ, ಇವರೊಂದಿಗೆ ಅಧಿಕಾರೇತರರ ಪಟ್ಟಿ ಬಿಡುಗಡೆ ಮಾಡಿದೆ. ಈ ಸದಸ್ಯರ ಸಂಖ್ಯೆಯೇ ಈಗ ದಾಖಲೆಯಾಗಿದೆ.
ಮೃಗಾಲಯ ಪ್ರಾಧಿಕಾರದ ಮಾಜಿ ಆಧ್ಯಕ್ಷೆ ಮಲ್ಲಿಗೆ ವಿರೇಶ್, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಅವರಿಗೂ ಅಧ್ಯಕ್ಷ ಸ್ಥಾನ ಸಿಕ್ಕಿದೆ.
ಉಪ ಸಮಿತಿಗಳಲ್ಲಿ ಇರುವ ಸದಸ್ಯರ ಸಂಖ್ಯೆ:
ಯೋಗ ದಸರಾ ಉಪ ಸಮಿತಿ: ಅಧ್ಯಕ್ಷ-ನಾಗೇಶ್, ಉಪಾಧ್ಯಕ್ಷರಾಗಿ 6 ಮಂದಿ ನೇಮಕ ಮಾಡಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ ಒಟ್ಟಾರೆ 135 ಮಂದಿ ಸದಸ್ಯರು.
ಆಹಾರ ಮೇಳ ಉಪ ಸಮಿತಿ: ಅಧ್ಯಕ್ಷ ಮಧುಕುಮಾರ್, ಆರು ಮಂದಿ ಉಪಾಧ್ಯಕ್ಷರು ಸೇರಿದಂತೆ 145 ಸದಸ್ಯರು.
ಕವಿಗೋಷ್ಠಿ ಉಪ ಸಮಿತಿ: ಅಧ್ಯಕ್ಷ ಸುರೇಶ್, ಆರು ಮಂದಿ ಉಪಾಧ್ಯಕ್ಷರು ಸೇರಿದಂತೆ 122 ಮಂದಿ ಸದಸ್ಯರು.
ದೀಪಾಲಂಕಾರ ಉಪ ಸಮಿತಿ: ಅಧ್ಯಕ್ಷ ಹೆಚ್.ಜೆ.ರಾಘವೇಂದ್ರ, ಆರು ಮಂದಿ ಉಪಾಧ್ಯಕ್ಷರು ಸೇರಿದಂತೆ 126 ಮಂದಿ ಸದಸ್ಯರು.
ಕುಸ್ತಿ ಉಪ ಸಮಿತಿ: ಅಧ್ಯಕ್ಷ ರಮೇಶ್ ನಾಯಕ್, ಆರು ಮಂದಿ ಉಪಾಧ್ಯಕ್ಷರು ಸೇರಿದಂತೆ 136 ಸದಸ್ಯರು.
ಪಂಜಿನ ಕವಾಯತು ಉಪಸಮಿತಿ: ಅಧ್ಯಕ್ಷ ಅನಿಲ್‌ರಾಜ್, 6 ಮಂದಿ ಉಪಾಧ್ಯಕ್ಷ ಸೇರಿದಂತೆ 155 ಮಂದಿ ಸದಸ್ಯರು.
ಲಲಿತ ಕಲೆ ಮತ್ತು ಕರಕುಶಲ ಉಪ ಸಮಿತಿ: ಅಧ್ಯಕ್ಷ ರಘುರಾಜೇ ಅರಸ್, 6 ಮಂದಿ ಉಪಾಧ್ಯಕ್ಷರು ಸೇರಿದಂತೆ 125 ಮಂದಿ ಸದಸ್ಯರು.
ಸ್ವಾಗತ, ಆಮಂತ್ರಣ ಮತ್ತು ಸ್ಥಳಾವಕಾಶ ಉಪ ಸಮಿತಿ: ಅಧ್ಯಕ್ಷ ಚೋಳರಾಜು, 6 ಮಂದಿ ಉಪಾಧ್ಯಕ್ಷರು ಸೇರಿ 125 ಮಂದಿ ಸದಸ್ಯರು.
ಯುವ ದಸರಾ ಉಪ ಸಮಿತಿ: ಅಧ್ಯಕ್ಷ ಆರ್.ಸಿ.ಮಹೇಶ್, 7 ಮಂದಿ ಉಪಾಧ್ಯಕ್ಷರು ಸೇರಿ 155 ಸದಸ್ಯರು.
ರೈತ ದಸರಾ ಉಪ ಸಮಿತಿ: ಅಧ್ಯಕ್ಷ ಕೆ.ಪಿ.ಯೋಗೇಶ್, 6 ಮಂದಿ ಉಪಾಧ್ಯಕ್ಷ ಸೇರಿದಂತೆ 136 ಸದಸ್ಯರು.
ಕ್ರೀಡೆ ಉಪ ಸಮಿತಿ: ಅಧ್ಯಕ್ಷ ನಂದೀಶ್, 6 ಮಂದಿ ಉಪಾಧ್ಯಕ್ಷರು ಸೇರಿದಂತೆ 140 ಸದಸ್ಯರು.
ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿ: ಅಧ್ಯಕ್ಷೆ ಮಲ್ಲಿಗೆ ವೀರೇಶ್, 7 ಮಂದಿ ಉಪಾಧ್ಯಕ್ಷರು ಸೇರಿದಂತೆ 130 ಮಂದಿ ಸದಸ್ಯರು.
ಸ್ವಚ್ಛತೆ ಮತ್ತು ವ್ಯವಸ್ಥೆ ಉಪ ಸಮಿತಿ: ಅಧ್ಯಕ್ಷರಾಗಿ ಸುಭಾನ್, 6 ಮಂದಿ ಉಪಾಧ್ಯಕ್ಷರು ಸೇರಿ 150 ಮಂದಿ ಸದಸ್ಯರು.
ಸಾಂಸ್ಕೃತಿಕ ದಸರಾ ಉಪ ಸಮಿತಿ: ಅಧ್ಯಕ್ಷ ಕೆ.ವಿ.ಮಲ್ಲೇಶ, 8 ಮಂದಿ ಉಪಾಧ್ಯಕ್ಷರು ಸೇರಿದಂತೆ 140 ಸದಸ್ಯರು.
ಮೆರವಣಿಗೆ ಉಪ ಸಮಿತಿ: ಅಧ್ಯಕ್ಷ ಕುಮಾರ, 7 ಮಂದಿ ಉಪಾಧ್ಯಕ್ಷರು ಸೇರಿದಂತೆ 155 ಮಂದಿ ಸದಸ್ಯರು.
ಸ್ತಬ್ಧಚಿತ್ರ ಉಪ ಸಮಿತಿ: ಅಧ್ಯಕ್ಷ ಪ್ರಶಾಂತ್, 7 ಮಂದಿ ಉಪಾಧ್ಯಕ್ಷರು ಸೇರಿದಂತೆ, 145 ಮಂದಿ ಸದಸ್ಯರು.