ವಿಜಯನಗರ : ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಸಿಎಂ ಸಿದ್ದರಾಮಯ್ಯ ಕಟ್ಟಾ ಅಭಿಮಾನಿಯಾದ ಮಲ್ಲೇಶಪ್ಪ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿ ತಮ್ಮ ಮನೆಯ ಬಾಗಿಲಿನಲ್ಲಿ ಸಿಎಂ ಸಿದ್ದರಾಮಯ್ಯ ಚಿತ್ರವನ್ನು ಕೆತ್ತಿಸುವ ಮೂಲಕ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾದ ಪಾರ್ವತಮ್ಮರಿಗೆ 30 ಸಾವಿರ ರೂ. ಬಂದಿದ್ದು, ಅದನ್ನು ಕೂಡಿಟ್ಟು ಅದರಿಂದ ಅವರ ಮನೆಗೆ ಹೊಸ ಬಾಗಿಲನ್ನು ನಿರ್ಮಿಸಿದ್ದಾರೆ. ಅದರ ಮೇಲ್ಭಾಗದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರನ್ನು ಕೆತ್ತಿಸಿದ್ದಾರೆ. ಅದರ ಮಧ್ಯಭಾಗದಲ್ಲಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಕೆತ್ತಿಸಿದ್ದಾರೆ. ಬಾಗಿಲಿನ ಕೆಳಭಾಗದಲ್ಲಿ ಗೃಹಲಕ್ಷ್ಮಿ ಎಂದು ಬರೆಸಿದ್ದಾರೆ. ದುರ್ಗೇಶ್ ಎಂಬುವವರು ಈ ಬಾಗಿಲನ್ನು ಕೆತ್ತಿದ್ದಾರೆ.