Breaking News

ಚಡಚಣ ಎಸ್‌‍ಬಿಐ ಬ್ಯಾಂಕ್‌ ದರೋಡೆ; ದರೋಡೆಕೋರರ ಪತ್ತೆಗೆ 8 ತಂಡಗಳ ರಚನೆ; ಬಂಗಾರ ಇಟ್ಟವರಿಂದ ಗೋಳಾಟ!

Spread the love

ವಿಜಯಪುರ: ಜಿಲ್ಲೆಯ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ​ಗೆ ಮಂಗಳವಾರ ಸಂಜೆ ಮಾಸ್ಕ್​ ಧರಿಸಿಕೊಂಡು ನುಗ್ಗಿದ್ದ ಕಳ್ಳರು, ಬೃಹತ್ ಪ್ರಮಾಣದ​ ಸ್ವತ್ತು ದರೋಡೆ ಮಾಡಿಕೊಂಡು ಪರಾರಿಯಾಗಿದ್ದು, ಪ್ರಕರಣ ಸಂಬಂಧಪಟ್ಟಂತೆ ದರೋಡೆಕೋರರ ಬಂಧನಕ್ಕೆ 8 ವಿಶೇಷ ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಎಸ್​​ಪಿ: ಬ್ಯಾಂಕ್​ ದರೋಡೆ ಕುರಿತು ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ (ಸೋಮವಾರ) ಸಂಜೆ ನಡೆದ ದರೋಡೆ ಪೂರ್ವ ನಿಯೋಜಿತ. ದರೋಡೆ ಉದ್ದೇಶದಿಂದಲೇ ಚಡಚಣ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ​ಗೆ ಖಾತೆ ತೆರೆಯಲೆಂದು ಓರ್ವ ವ್ಯಕ್ತಿ ಬಂದಿದ್ದು, ಸುಮಾರು 4:30ರಿಂದ ಬ್ಯಾಂಕ್​ನಲ್ಲಿಯೇ ಕುಳಿತಿದ್ದ. ಇನ್ನೇನು ಬ್ಯಾಂಕ್​ ಮುಚ್ಚುವ ಸಮಯವಾಗಿತ್ತು. ಅಲ್ಲದೇ, ಬ್ಯಾಂಕ್​ ಸಿಬ್ಬಂದಿ ಕೂಡ ತೆರಳಬೇಕಿತ್ತು. ಅಷ್ಟರಲ್ಲೇ ಅಲ್ಲಿ ಕುಳಿತಿದ್ದ ವ್ಯಕ್ತಿ, ಹೊರಗಡೆಯಿಂದ ಮತ್ತಿಬ್ಬರನ್ನು ಕರೆಸಿಕೊಂಡಿದ್ದಾನೆ. ಎಲ್ಲರೂ ಸೇರುತ್ತಿದ್ದಂತೆ ಬ್ಯಾಂಕ್​ನಲ್ಲಿದ್ದ 6 ಮಂದಿ ಸಿಬ್ಬಂದಿ ಹಾಗೂ 4 ಜನ ಗ್ರಾಹಕರನ್ನು ಪಿಸ್ತೂಲ್​ನಿಂದ ಹೆದರಿಸಿ ಬ್ಯಾಂಡ್‌ನಿಂದ ಕೈ ಕಟ್ಟಿ ಒಂದು ರೂಮ್‌ನಲ್ಲಿ ಕೂಡಿ ಹಾಕಿ ಈ ದರೋಡೆ ನಡೆಸಿರುವುದು ಕಂಡು ಬಂದಿರುವುದಾಗಿ ತಿಳಿಸಿದರು.


Spread the love

About Laxminews 24x7

Check Also

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ

Spread the loveಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ವಿಳಂಬ ಆಗಲು ರಾಜ್ಯ ಸರ್ಕಾರ, ಸಚಿವ ಸಂತೋಷ ಲಾಡ್ ಕಾರಣ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ