ಜಾರಕಿಹೊಳಿ ಲಿಂಗಾಯತ ವಿರೋಧಿ ಎಂಬ ಅಪಪ್ರಚಾರ ನಿಲ್ಲಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ |
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ನಿಮಿತ್ತ ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿ ದಿವಂಗತ ಅಪ್ಪಣಗೌಡ ಪಾಟೀಲ ಪ್ಯಾನಲ್ ನ ಪ್ರಚಾರದ ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ,
ಡಿಸಿಸಿ ಬ್ಯಾಂಕ್ ಅಭ್ಯರ್ಥಿ ರಾಜೇಂದ್ರ ಪಾಟೀಲ ಸೇರಿದಂತೆ ಅನೇಕರು ಇದ್ದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಜಾರಕಿಹೊಳಿ ಕುಟುಂಬದ ವಿರುದ್ದ ಕೇಲ ವಿರೋಧಿಗಳ ಜನರಿಗೆ ದಿಕ್ಕು ತಪ್ಪಿಸುವ ಕೇಲಸ ಮಾಡುತ್ತಿದ್ದು, ಜಾರಕಿಹೊಳಿ ಸಹೋದರರು ಲಿಂಗಾಯತ ವಿರೋಧಿಗಳು ಎಂದು
ಅಪಪ್ರಚಾರಮಾಡುತ್ತಿದ್ದು, ಜನರು ಅಂಥವರಿಗೆ ಕಿವಿಗೊಡಬಾರದು ಎಂದು ಹೇಳಿದರು. ಜಾತಿಯ ಹೆಸರು ಬಳಸಿ ಅಧಿಕಾರಕ್ಕೆ ಬರುತ್ತಾರೆ ಹೊರತು ಯಾರಿಗೂ ಸಮಾಜಕ್ಕೆ ಸಹಾಯ ಮಾಡುವುದಲ್ಲ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 12 ಸೀಟ್ ಗೆಲುತ್ತವೆ. ಲಿಂಗಾಯತ ಸುಮುದಾಯದವರನ್ನೇ ಅಧ್ಯಕ್ಷ ಸ್ಥಾನ ಹೊಂದಲಿದ್ದಾರೆ ಎಂದರು.