ಖಾನಾಪುರ ರೈಲು ನಿಲ್ದಾಣಕ್ಕೆ 14 ಕೋಟಿ ಅನುದಾನ – 2026ರೊಳಗೆ ಮಾದರಿ ರೈಲು ನಿಲ್ದಾಣ ಗುರಿ |
ಖಾನಾಪುರ:ಖಾನಾಪುರದ ರೈಲು ನಿಲ್ದಾಣದ ಅಭಿವೃದ್ದಿಗಾಗಿ ರೈಲ್ವೇ ಇಲಾಖೆಯಿಂದ ಮೂರು ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು ಇದರಲ್ಲಿ ನಿಲ್ದಾಣದ ಪ್ಲಾಟಫಾರ್ಮ್ ವಿಸ್ತರಣೆ,ಶೌಚಾಲಯ ನಿರ್ಮಾಣ ಸೇರಿದಂತೆ ಪ್ರಯಾಣಿಕರ ಅನುಕೂಲಕ್ಕೆ ನಾನಾ ಸೌಲಭ್ಯ ಒದಗಿಸುವ ಕಾಮಿಗಾರಿಗಳಿಗೆ ಸಚಿವ ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಖಾನಾಪುರ ಸಂಪದ್ಭರಿತ ತಾಲೂಕಾಗಿದ್ದು ಪ್ರಮುಖವಾಗಿ ಕೃಷಿ ಉತ್ಪಾದನೆ ಮತ್ತು ರಾಷ್ಟ್ರೀಯ ಕುಂಬಾರಿಕೆ ಕೇಂದ್ರ ಹೊಂದಿರುವ ತಾಲೂಕಾಗಿದ್ದು ಮುಂದಿನ ದಿನಗಳಲ್ಲಿ ಖಾನಾಪುರ ತಾಲೂಕನ್ನ ಜಿಲ್ಲೆಯಲ್ಲಿ ಅಭಿವೃದ್ಧಿ ಹೊಂದಿದ ತಾಲೂಕು ಮಾಡುವಲ್ಲಿ ಶ್ರಮಿಸಬೇಕಿದೆ.
ಮುಂದಿನ ದಿನಗಳಲ್ಲಿ ಖಾನಾಪುರ ರೈಲು ನಿಲ್ದಾಣವನ್ನ ಮಾದರಿ ರೈಲು ನಿಲ್ದಾಣವನ್ನಾಗಿ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕಿದೆ ಅದಕ್ಕಾಗಿ ಖಾನಾಪುರ ರೈಲು ನಿಲ್ದಾಣಕ್ಕೆ ವಿಶೇಷ 11ಕೋಟಿ ಅನುದಾನವನ್ನ ನೀಡಿದ್ದು ವಿವಿಧ
ಅಭಿವೃದ್ಧಿ ಕಾಮಗಾರಿಗಳು ಮುಂದಿನ 2026ರ ಒಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಳ್ಳುವ ಮೊದಲು ರೈಲು ನಿಲ್ದಾಣಗಳಲ್ಲಿ ಕುರ್ಚಿಯಿಂದ ಹಿಡಿದು ಕುಡಿಯುವ ನೀರಿಗೂ ಬರವಿತ್ತು ಆದರೆ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಎರಡು ಲಕ್ಷ ಅರವತ್ತೈದು ಸಾವಿರ ಕೋಟಿ ಅನುದಾನ ಕೊಡುವ ಮೂಲಕ ಭಾರತ ರೈಲನ್ನ ವಿಮಾನ ದರ್ಜೆಗೆ ಏರಿಸಿದ್ದಾರೆ ಎಂದರು