ಜಾತಿ ಗಣತಿಯಲ್ಲಿ ಮರಾಠಾ ಸಮಾಜದ ಗುರುತು ಸ್ಪಷ್ಟವಾಗಬೇಕು – ಎಂ.ಜಿ.ಮೋಳೆ |
ಧರ್ಮ ಹಿಂದು, ಜಾತಿ ಮರಾಠಾ, ಮಾತೃ ಭಾಷಾ ಮರಾಠಿ, ಉಪಜಾತಿ ಕುಂಬಿ ಎಂದು ಜಾತಿಗಣತಿಯಲ್ಲಿ ಉಲ್ಲೇಖಿಸಬೇಕು ಎಂದು ಸಕಲ ಮರಾಠಾ ಸಮಾಜ ಮತ್ತು ಮರಾಠಾ ಪರಿಷತ್ತಿನ ಎಂ.ಜಿ.ಮೋಳೆ ಹೇಳಿದರು.
ಮಂಗಳವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರಕಾರ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದೆ. ಸಾಮಾನ್ಯ ವರ್ಗಗಳ ಬಗ್ಗೆ ಆಯೋಗ ತೆಗೆದುಕೊಳ್ಳುವ ತಿರ್ಮಾನಕ್ಕೆ ನಾವು ಬದ್ಧರಿದ್ದೇವೆ ಎಂದರು.
ಸೆ.22 ರಿಂದ ಸರಕಾರ ಜಾತಿ ಗಣತಿ ಸಮೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಆಗ ಮರಾಠಾ ಸಮಾಜದವರು ಎಲ್ಲರೂ ಒಗ್ಗಟ್ಟು ಪ್ರದರ್ಶನ ತೋರಿ ಕಡ್ಡಾಯವಾಗಿ ಭಾಗಿಯಾಗಬೇಕು. ಮರಾಠಾ ಸಮಾಜ ಸಮೀಕ್ಷೆಗೆ ಸಹಕಾರ ಕೊಡದಿದ್ದರೇ ನಮ್ಮ ಸಮಾಜಕ್ಕೆ ನಷ್ಟವಾಗುತ್ತದೆ ಎಂದರು.