ಮುಂದೆ ಯಾವಾಗಲೂ ಅಧ್ಯಕ್ಷ ಆಗುವುದಿಲ್ಲ : ರಮೇಶ ಕತ್ತಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅಣ್ಣಾಸಾಹೇಬ ಜೊಲ್ಲೆ..!
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ದಿವಂಗತ ಅಪ್ಪಣಗೌಡ ಪಾಟೀಲ ಸಹಕಾರಿ ಪ್ಯಾನಲ್ ನ ಪೂರ್ವ ಭಾವಿ ಸಭೆಯು ಹುಕ್ಕೇರಿ ತಾಲೂಕಿನ ನಿಡಸೋಸಿಯಲ್ಲಿ ಜರುಗಿತು.
ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮಾತನಾಡಿ,ಡಿಸಿಸಿ ಬ್ಯಾಂಕ್ ನಲ್ಲಿ ಮುಂದೆ ನಮ್ಮ ಆಡಳಿತ ಬರಲಿದ್ದು, ರೈತರಿಗೆ ಮರು ಪಾವತಿಯನ್ನು ಫ್ರೀ ಯಾಗಿ ಮಾಡಿಕೊಡುತ್ತೆವೆ, ಅಧ್ಯಕ್ಷ ಸ್ಥಾನ ಕಳೆದುಕೊಂಡು ವರ್ಷವಾಗಿದ್ದು,
ಇನ್ನೂ ಮುಂದೆ ಯಾವಾಗಲೂ ಅಧ್ಯಕ್ಷ ಆಗುವುದಿಲ್ಲ ಎಂದು ಪರೋಕ್ಷವಾಗಿ ರಮೇಶ ಕತ್ತಿ ಅವರಿಗೆ ಟಾಂಗ್ ನೀಡಿದರು.
ಕತ್ತಿ ಅವರು ಕಳೆದ 30 ವರ್ಷಗಳಿಂದ ದುರಾಡಳಿತ ನಡೆಸಿದ್ದು, ಪಾರದರ್ಶಕ ಆಡಳಿತ ನಡೆಸಲು ಡಿಸಿಸಿ ಬ್ಯಾಂಕ್ ಅಭ್ಯರ್ಥಿ, ರಾಜೇಂದ್ರ ಪಾಟೀಲ ಅವರಿಗೆ ಒಂದು ಬಾರಿ ಅವಕಾಶ ನೀಡಿ ಎಂದು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಮನವಿ ಮಾಡಿದರು.