Breaking News

ದಸರಾ ಮಹೋತ್ಸವದ ಮುನ್ನುಡಿಯ ಸಡಗರಕ್ಕೆ ಸಿದ್ಧತೆ

Spread the love

ಮೈಸೂರು : ದಸರಾ ಮಹೋತ್ಸವಕ್ಕೂ ಮುನ್ನ ನಡೆಯುವ ‘ಯುವ ಸಂಭ್ರಮ’ದ ಸಾಂಸ್ಕೃತಿಕ ರಂಗು ಸೆ.10 ರಿಂದ 17ರ ವರೆಗೆ ನಗರದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಈ ಬಾರಿ 14 ವಿಶಿಷ್ಟ ವಸ್ತುವಿಷಯಗಳಡಿ (ಥೀಮ್) ರಾಜ್ಯದ ವಿವಿಧ ಕಾಲೇಜಿನ ಸುಮಾರು 400-500 ತಂಡಗಳು ಭಾಗವಹಿಸಲಿವೆ. ಯುವ ಸಂಭ್ರಮವನ್ನು ಯುವ ರಾಜ್ ಕುಮಾರ್ ಉದ್ಘಾಟಿಸಲಿದ್ದು, ಈ ಕಾರ್ಯಕ್ರಮದ ಶೀರ್ಷಿಕೆ ಗೀತೆಯನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ.

ದಸರಾ ಮಹೋತ್ಸವದ ಆರಂಭಕ್ಕೂ ಮುನ್ನವೇ ಯುವ ಪಡೆಯನ್ನು ಕುಣಿದು ಕುಪ್ಪಳಿಸುವಂತೆ ಮಾಡುವ ಯುವ ಸಂಭ್ರಮ ಸೆ.17ರ ವರೆಗೆ ಜರುಗಲಿದ್ದು, ಈ ಬಾರಿಯೂ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 8 ದಿನಗಳ ಕಾಲ ಸಾಂಸ್ಕೃತಿಕ ಸಂಭ್ರಮ ಕಳೆಗಟ್ಟಲಿದೆ.

ರಾಜ್ಯದ ವಿವಿಧ ಕಾಲೇಜುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲು ಈಗಾಗಲೇ ಆಹ್ವಾನ ನೀಡಿದ್ದು, ಆಯಾ ಕಾಲೇಜುಗಳ ವಿದ್ಯಾರ್ಥಿ ತಂಡಗಳು ಸದ್ದಿಲ್ಲದೇ ತಾಲೀಮು ನಡೆಸುತ್ತಿವೆ. ಪ್ರತಿದಿನ ಸಂಜೆ 5 ರಿಂದ ರಾತ್ರಿ 10ರ ವರೆಗೆ ನಡೆಯುವ ಯುವ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಶೇಷವಾಗಿ ಯುವ ಪಡೆಯನ್ನು ಹುಚ್ಚೆದ್ದು ಕುಣಿಯುವಂತೆ ಮಾಡಲಿವೆ.

14 ವಿಷಯಗಳ ಥೀಮ್ : ದಸರಾ ಯುವ ಸಂಭ್ರಮ ಉಪಸಮಿತಿಯು 14 ಮುಖ್ಯ ವಸ್ತು ವಿಷಯಗಳೊಂದಿಗೆ ಹಲವು ಮಹತ್ವದ ವಿಷಯಗಳನ್ನು ನೀಡಿದ್ದು, ಅದರಂತೆ ಸಜ್ಜುಗೊಳ್ಳಲು ಕಾಲೇಜು ತಂಡಗಳು ತಯಾರಿ ನಡೆಸುತ್ತಿವೆ. ನೃತ್ಯದ ಸಂಭ್ರಮದೊಂದಿಗೆ ಸಾಮಾಜಿಕ ಕಳಕಳಿ ಸಾರುವಂತೆ ವಸ್ತುವಿಷಯಗಳನ್ನು ಉಪಸಮಿತಿ ನೀಡಿದೆ. ಕರ್ನಾಟಕ ಜಾನಪದ ವೈವಿಧ್ಯತೆ ಮತ್ತು ಪರಂಪರೆ, ಪ್ರತಿ ಜಿಲ್ಲೆಯ ಪ್ರಚಲಿತ ನೃತ್ಯಪ್ರಕಾರ, ಕನ್ನಡ ಸಿನಿಮಾಧಾರಿತ ಆಧುನಿಕ ನೃತ್ಯ ಪ್ರಕಾರಗಳು, ಹಳೇ ಹಾಗೂ ಹೊಸ ಗೀತ ಗಾಯನಗಳ ಸಂಯೋಜನೆಯೊಂದಿಗೆ ಕರ್ನಾಟಕದ ವೈಭವ ಸಾರುವಂತ ನೃತ್ಯ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ.


Spread the love

About Laxminews 24x7

Check Also

ಹುಕ್ಕೇರಿಯಲ್ಲಿ ಬೆಂಬಲ ಬೇಲೆ ನೀಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ.

Spread the loveಹುಕ್ಕೇರಿ : ಹುಕ್ಕೇರಿಯಲ್ಲಿ ಬೆಂಬಲ ಬೇಲೆ ನೀಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ. ಹುಕ್ಕೇರಿ ನಗರದಲ್ಲಿ ಕರ್ನಾಟಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ