Breaking News

ಹುಕ್ಕೇರಿಯಲ್ಲಿ ಬೆಂಬಲ ಬೇಲೆ ನೀಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ.

Spread the love

ಹುಕ್ಕೇರಿ : ಹುಕ್ಕೇರಿಯಲ್ಲಿ ಬೆಂಬಲ ಬೇಲೆ ನೀಡುವಂತೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ.
ಹುಕ್ಕೇರಿ ನಗರದಲ್ಲಿ ಕರ್ನಾಟಕ ರೈತ ಸಂಘದ ವತಿಯಿಂದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೇಲೆ ಘೋಷನೆ ಮಾಡುವಂತೆ ಆಗ್ರಹಿಸಿ ಕೋರ್ಟ ಸರ್ಕಲ್ ಬಂದ್ ಮಾಡಿ ಪ್ರತಿಭಟನೆ ಜರುಗಿಸಿದರು.
ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ನಾಶವಾಗಿದ್ದು ಹಾಗೂ ಸೋಯಾಬೀನ, ಕಬ್ಬು ಗೋವಿನ ಜೋಳ ಗಳಿಗೆ ಕರ್ನಾಟಕ ಸರ್ಕಾರ ಕೂಡಲೇ ಬೆಂಬಲ ಬೆಲೆ ಘೋಷನೆ ಮಾಡಬೇಕು ಮತ್ತು ಬೆಳೆ ನಾಶ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಹುಕ್ಕೇರಿ ತಾಲೂಕಿನ ವಿವಿಧ ರೈತ ಸಂಘಟನೆಗಳ ಮುಖಂಡರು ,ರೈತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ಜರುಗಿಸಿದರು.
ರೈತ ಮುಖಂಡರು ಮಾತನಾಡಿ ರಾಜ್ಯದ ಸಿದ್ದರಾಮಯ್ಯ ನವರ ಸರ್ಕಾರ ಮತ್ತು ಅಧಿಕಾರಿಗಳು ರೈತರನ್ನು ಕಡೆಗಣಿಸಿ ಬೇಕಾ ಬಿಟ್ಟಿ ಅಯುಷರಾಮಿ ಆಡಳಿತ ನಡೆಸುತ್ತಿದೆ, ದೇಶಕ್ಕೆ ಅನ್ನ ನೀಡುವ ರೈತರನ್ನು ಕಡೆಗಣಿಸಿದರೆ ಮುಂಬರುವ ದಿನಗಳಲ್ಲಿ ಅನ್ನಕ್ಕಾಗಿ ಆಹಾಕಾರ ಜರಗುತ್ತದೆ ಎಂದು ಎಚ್ಚರಿಸಿದರು.
ಕಬ್ಬಿನ ಬೆಲೆ ಐದು ಸಾವಿರಕ್ಕೆ ನಿಗದಿ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾರ್ಖಾನೆಗಳಿಗೆ ಟ್ರ್ಯಾಕ್ಟರ ಮತ್ತು ಟ್ರಕ್ ಗಳನ್ನು ನೀಡುವದಿಲ್ಲಾ ಎಂದು ಎಚ್ಚರಿಸಿದರು.
ಸ್ಥಳಕ್ಕೆ ಹುಕ್ಕೇರಿ ತಹಸಿಲ್ದಾರ ಬಲರಾಮ ಕಟ್ಟಿಮನಿ ರೈತರೊಂದಿಗೆ ಚರ್ಚಿಸಿ ರೈತರ ಮನವಿಯನ್ನು ಸ್ವಿಕರಿಸಿ ಸರ್ಕಾರಕ್ಕೆ ಮನವಿ ತಲುಪಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಗೋಪಾಲ ಮರಬಸನ್ನವರ, ಜಿಯಾವುಲ್ ವಂಟಮೂರಿ, ಸಲಿಂ ಮುಲ್ಲಾ, ಬಸವಪ್ರಭು ವಂಟಮೂರಿ, ಸುನೀಲ ಬಳೋಬಾಳ, ಹಬೀಬ ಮುಲ್ಲಾ, ಶಾಂತಿನಾಥ ಮಗದುಮ್ಮ ಮೊದಲಾದವರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಉಡುಪಿ: ಸೆಪ್ಟೆಂಬರ್ 7ರಂದು ಖಗ್ರಾಸ ಚಂದ್ರಗ್ರಹಣ; ಕೆಂಬಣ್ಣದ ಚಂದಿರನ ದರ್ಶನ

Spread the love ಉಡುಪಿ: ಸೆ.7ರ ಹುಣ್ಣಿಮೆಯ ರಾತ್ರಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಖಗ್ರಾಸ ಚಂದ್ರ ಗ್ರಹಣದ ವೇಳೆ, ಚಂದ್ರನು ತಾಮ್ರದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ