ಹುಕ್ಕೇರಿ : ಆರೋಗ್ಯಕರ ಆಹಾರ ಸೇವನೆಯಿಂದ ಸಂತೋಷದ ಜೀವನ ನಡೆಸ ಬಹುದು – ನ್ಯಾಯಾಧೀಶ ರಾಜಣ್ಣಾ.
ಆರೋಗ್ಯಕರ ಆಹಾರದಿಂದ ಸಂತೋಷದ ಜೀವನ ನಡೆಸಬಹುದು ಎಂದು ಹುಕ್ಕೇರಿ ಹಿರಿಯ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ ಹೇಳಿದರು.

ಇಂದು ಹುಕ್ಕೇರಿ ನಗರದಲ್ಲಿ ವಿಶ್ವ ಪೌಷ್ಟಿಕ ಆಹಾರ ದಿನಾಚಾರಣೆ ಅಂಗವಾಗಿ ಕಾನೂನು ಸೇವಾ ಸಮಿತಿ ,ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಲಾಯಿತು.
ನಂತರ ಅಂಗನವಾಡಿ ಇಲಾಖೆ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಜರುಗಿತು.
ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣಾ ಸಂಕಣ್ಣವರ ಮಾತನಾಡಿ ಇತ್ತಿಚಿಗೆ ಸಿದ್ದ ಆಹಾರ ಸೇವನೆಯಿಂದ ಪೌಷ್ಟಿಕ ಆಹಾರ ಕೋರತೆಯಾಗಿ ಆರೋಗ್ಯಕರ ಜೀವನ ಸಾಗುಸಲು ಕಷ್ಟ ಸಾಧ್ಯವಾಗುತ್ತಿದೆ ಕಾರಣ ಆರೋಗ್ಯಕರ ಆಹಾರ ಸಂತೋಷದ ಜೀವನ ವಾಗುತ್ತದೆ ಎಂದರು 

ವೇದಿಕೆ ಮೇಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್ ಹೋಳೆಪ್ಪಾ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ, ಪೋಲಿಸ್ ಇನ್ಸಪೇಕ್ಟರ ಮಹಾಂತೇಶ ಬಸ್ಸಾಪೂರೆ, ನ್ಯಾಯವಾದಿಗಳಾದ ಬಿ ಎಮ್ ಜೀನರಾಳೆ,ಶೇಖರ ಭಡಗಾಂವೆ, ಎಸ್ ಜಿ ನದಾಫ್, ವಿ ಎಲ್ ಗಸ್ತಿ, ಬಿ ಬಿ ಬಾಗಿ ಉಪಸ್ಥಿತರಿದ್ದರು.
ಸಿವ್ಹಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ ನಮ್ಮ ದೇಶ ಸದೃಡವಾಗಿರಲು ಪೌಷ್ಟಿಕ ಆಹಾರ ದಿಂದ ಮಾತ್ರ ಸಾಧ್ಯವಾಗುತ್ತದೆ ಕಾರಣ ಉತ್ತಮ ಆಹಾರ ಸೇವನೆ ನಮ್ನೆಲ್ಲರ ಆದ್ಯತೆ ಯಾಗಬೇಕು ಎಂದರು ( )
ಅಂಗನವಾಡಿ ಮಕ್ಕಳಿಂದ ಪೌಷ್ಟಿಕ ಆಹಾರ ಕುರಿತು ರೂಪಕ ಪ್ರದರ್ಶಿಸಲಾಯಿತು ಹಾಗೂ ಗರ್ಭಿಣಿಯರಿಗೆ ಸಿಮಂತ ಕಾರ್ಯ ಜರುಗಿದವು.
ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ ಮಾತನಾಡಿ ನಾವು ದಿನ ನಿತ್ಯ ತಿನ್ನು ತರಕಾರಿಯನ್ನು ರಸ್ತೆ ಮೇಲೆ ೮ಟ್ಟು ಮಾರುವದು ಹಾಗೂ ಅಯುಷ್ಯಾರಾಮಿ ವಸ್ತುಗಳನ್ನು ಶೋ ರೂಂ ಗಳಲ್ಲಿ ಇಟ್ಟು ಮಾರಾಟ ಮಾಡುತ್ತೆವೆ ಕಾರಣ ಸರ್ಕಾರ ಇದನ್ನು ಗಮನಿಸಿ ಶುದ್ಧವಾದ ಮತ್ತು ಶುಚಿಯಾದ ಆಹಾರಗಳು ಸೂಕ್ತ ಸ್ಥಳಗಳಲ್ಲಿ ಮಾರಾಟ ಮಾಡುವ ವ್ಯವಸ್ಥೆ ತಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ನ್ಯಾಯವಾದಿಗಳ ಸಂಘದ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.