ಶಂಕರ ಫಕೀರಪ್ಪ ಪರಸಣ್ಣವರ ನಿಧನ
ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಜನಸಂಪರ್ಕಾಧಿಕಾರಿ ಮುಖ್ಯಸ್ಥ(ಪಿಆರ್‌ಓ) ಶಂಕರ ಫಕೀರಪ್ಪ ಪರಸಣ್ಣನವರ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ೫೬ ವರ್ಷ ವಯಸ್ಸಾಗಿತ್ತು. ಮೂಲತಃ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದರಾದ ಶಂಕರ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಅವರ ಅಕಾಲಿಕ ಅಗಲಿಕೆ ಕೆಎಲ್‌ಇ ಆಸ್ಪತ್ರೆಗೆ ಆಘಾತವನ್ನುಂಟು ಮಾಡಿದೆ. ಭಗವಂತನು ಅವರ ದಿವ್ಯಾತ್ಮಕ್ಕೆ ಚಿರಶಾಂತಿ ನೀಡಲೆಂದು ಕೆಎಲ್‌ಇ ಸಮಸ್ತ ಸಿಬ್ಬಂದಿ ವರ್ಗದವರು ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
Laxmi News 24×7