ಬೆಳಗಾವಿಯ ಖಾದ್ಯಪ್ರಿಯರ ಸೇವೆಗೆ ಅಣಿಯಾದ “ಹೊಟೇಲ್ ಸಮ್ರಾಟ್”
ಒಂದೇ ಸೂರಿನಡಿ ವೆಜ್-ನಾನ್ ವೆಜ್; ಸಭೆ-ಸಮಾರಂಭಗಳಿಗೆ ಹೇಳಿ ಮಾಡಿಸಿದ ಸ್ಥಳ
ಸುಸಜ್ಜಿತ ಕಟ್ಟಡ-ಉತ್ತಮ ಸೇವೆಬೆಳಗಾವಿಯಲ್ಲಿ ಸೇವೆ ಆರಂಭಿಸಿದ ಹೊಟೇಲ್ ಸಮ್ರಾಟ್…ಒಂದೇ ಸೂರಿನಡಿ ವೆಜ್-ನಾನ್ ವೆಜ್ ಪದಾರ್ಥಗಳುಸಭೆ-ಸಮಾರಂಭಗಳಿಗೆ ಹೇಳಿ ಮಾಡಿಸಿದ ಸ್ಥಳ
ಬೆಳಗಾವಿಗರ ಖಾದ್ಯ ಪ್ರೇಮಿಗಳಿಗೆ ಇಲ್ಲಿದೆ ಒಂದು ವಿಶೇಷ ಸುದ್ಧಿ. ಸಭೆ ಸಮಾರಂಭಗಳು ಅಥವಾ ಬರ್ಥಡೇ ಪಾರ್ಟಿಗಳನ್ನು ಉತ್ತಮ ವೆಜ್ ನಾಜ್ ವೆಜ್ ಭೋಜನದೊಂದಿಗೆ ಆಯೋಜಿಸಲು ನಿಮಗಾಗಿ ಒಂದೇ ಸೂರಿನಡಿ ಒಂದು ಸುಸಜ್ಜಿತ ಹೋಟೆಲ್ ಬೆಳಗಾವಿಯಲ್ಲಿ ಆರಂಭಗೊಂಡಿದೆ. ಹಾಗಾದರೇ, ಅದು ಯಾವುದು ಅಂತೀರಾ ಇಲ್ಲಿದೆ ನೋಡಿ ಒಂದು ವರದಿ.
ವಿಶಾಲವಾದ ಪ್ರದೇಶದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಹೋಟೆಲ್, ಒಂದೇ ಸೂರಿನಡಿ ವೆಜ್ ನಾನ್ ವೆಜ್ ಖಾದ್ಯಗಳು. ಸಭೆ ಸಮಾರಂಭಗಳು ಮತ್ತು ಬರ್ಥಡೇ ಪಾರ್ಟಿಗಾಗಿ ಸುಸಜ್ಜಿತ ಹಾಲ್. ಹೌದು, ಇವೆಲ್ಲವು ಬೆಳಗಾವಿ ಸಾವಗಾಂವ ರಸ್ತೆಯ ಹೊಟೇಲ್ ಸಮ್ರಾಟ್’ನಲ್ಲಿ ಕಾಣ ಬಹುದಾಗಿದೆ.
ಶನಿವಾರದಂದು ಬೆಳಗಾವಿಯ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್, ಪ್ರದೀಪ್ ಎಂ.ಜೆ. ಆಸೀಫ್ ಮುಲ್ಲಾ, ರಾಘವೇಂದ್ರ ಭೋರ್. ನಾರಾಯಣ ಪಾಟೀಲ್. ಮಾರುತಿ ಪಾಟೀಲ್, ಲಕ್ಷ್ಮಣ ಕೋರಜಕರ ಇನ್ನುಳಿದ ಗಣ್ಯರು ನೂತನ ಸಮ್ರಾಟ್ ಹೋಟೆಲ್’ಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಸಾಗರ ಮತ್ತು ಸಂತೋಷ ಅವರು ಗ್ರಾಮೀಣ ಭಾಗದಲ್ಲಿ ಒಂದು ಒಳ್ಳೆಯ ಸುಸಜ್ಜಿತ ಹೋಟೆಲ್ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಅವರು ಈ ಉದ್ಯೋಗದಲ್ಲಿ ಯಶಸ್ವಿಯಾಗಲಿ. ಗುಣಮಟ್ಟದ ಪದಾರ್ಥಗಳನ್ನು ನೀಡಿ, ಗ್ರಾಹಕರ ಪ್ರೀತಿ ವಿಶ್ವಾಸವನ್ನು ಗಳಿಸಲಿ. ಹೊಟೇಲ್’ಗೆ ಆಗಮಿಸುವವರಿಗೆ ಅತಿಥಿ ದೇವೋ ಭವಃ ಎಂಬ ಭಾವನೆಯೊಂದಿಗೆ ಸತ್ಕರಿಸಿ ಉತ್ತಮ ಸೇವೆ ನೀಡಬೇಕೆಂದು ಕರೆ ನೀಡಿದರು.
ಇನ್ನು ಯುವ ನಾಯಕ ಮೃಣಾಲ್ ಹೆಬ್ಬಾಳ್ಕರ್ ಅವರು ಕೂಡ ಸಾಗರ ಕೋರಜಕರ ಮತ್ತು ಸಂತೋಷ ಪಾಟೀಲ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಶುಭ ಹಾರೈಸಿದರು.
ನಾವಿಂದು ಹೊಸ ಕ್ಷೇತ್ರದಲ್ಲಿ ಪಾದಾರ್ಪಣೆಯನ್ನು ಮಾಡಿದ್ದೇವೆ. ನಮ್ಮಲ್ಲಿ ವಿವಿಧ ಬಗೆಯ ಭೋಜನ ಪದಾರ್ಥಗಳು ದೊರೆಯುತ್ತವೆ.ಅಲ್ಲದೇ, ಬರ್ತಡೇ ಪಾರ್ಟಿ, ಮೀಟಿಂಗಗಾಗಿ ಸುಸಜ್ಜಿತ ಹಾಲ್’ ಕೂಡ ನಮ್ಮಲ್ಲಿದೆ. ಸಾವಗಾಂವ ಪ್ರದೇಶದಲ್ಲಿ ಸಂಪೂರ್ಣ ಫ್ಯಾಮಿಲಿಗಾಗಿ ಒಂದು ಒಳ್ಳೆಯ ರೆಸ್ಟೋರೆಂಟ್ ಆಗಿ ಹೊರ ಹೊಮ್ಮಲಿದೆ. ನಮ್ಮ ಹೊಟೇಲ್’ಗೆ ಭೇಟಿ ನೀಡಿ, ಪ್ರೋತ್ಸಾಹಿಸಬೇಕೆಂದು ಹೊಟೇಲ್’ನ ಸಂಚಾಲಕರಾದ ಸಂತೋಷ ಪಾಟೀಲ್ ಕರೆ ನೀಡಿದರು.
ಇನ್ನು ಸಾವಗಾಂವ ರಸ್ತೆಯಲ್ಲಿ ಒಂದು ಸುಸಜ್ಜಿತ ಹೊಟೇಲ್’ನ್ನು ನಿರ್ಮಿಸಲಾಗಿದ್ದು, ಇದು ಸಂಪೂರ್ಣವಾಗಿ ಫ್ಯಾಮಿಲಿ ರೆಸ್ಟೋರೆಂಟ್ ಆಗಿದೆ. ವೆಜ್ ನಾನ್ ವೆಜ್ ಖಾದ್ಯ ಪದಾರ್ಥಗಳು ಇಲ್ಲಿ ದೊರೆಯುತ್ತವೆ. ಯಾವುದೇ ಸಭೆ – ಸಮಾರಂಭಗಳಿಗೆ ಇದು ಉತ್ತಮ ಸ್ಥಳವಾಗಿದೆ ಎಂದು ಹೊಟೇಲ್’ನ ಇನ್ನೋರ್ವ ಸಂಚಾಲಕರಾದ ಸಾಗರ ಕೋರಜಕರ ಹೇಳಿದರು
.
Laxmi News 24×7