ನೂರಾರು ಕಾಯಕ ಪಂಗಡಗಳ ಒಕ್ಕೂಟದಿಂದ ಶ್ರಾವಣ ಮಾಸದ ಪಾದಯಾತ್ರೆ ಹಾಗೂ ಪ್ರವಚನ
ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ, ಅಖಿಲ ಲಿಂಗಾಯತ ನೂರು ಕಾಯಕ ಪಂಗಡಗಳ ಒಕ್ಕೂಟವು (ರಿ) ಬೆಳಗಾವಿಯಲ್ಲಿ ಶ್ರದ್ಧಾ ಭಕ್ತಿಯಿಂದ ಪಾದಯಾತ್ರೆ ಮತ್ತು ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಈ ಪಾದಯಾತ್ರೆಯು ‘ನೂರು ಕಾಯಕ ಪಂಗಡದ ಮನೆಗಳಿಗೆ ಪೂಜ್ಯರ ನಡೆ’ ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿ ಭಕ್ತರನ್ನು ಆಶೀರ್ವದಿಸಿದರು.

ಶ್ರೀ ಜಗದ್ಗುರು ಮಾಚಿದೇವ ಮಹಾಸಂಸ್ಥಾನ, ಚಿತ್ರದುರ್ಗ ಮಠ, ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹಿರೇಮಠ, ಹುಕ್ಕೇರಿ, ಶ್ರೀ ಸಿದ್ದಬಸವ ದೇವರು, ಶೂನ್ಯಸಂಪಾದನಾ ಹುಣಸಿಕೊಳ್ಳ ಮಠ, ಯಮಕನಮರಡಿ, ಶ್ರೀ ರಾಚಯ್ಯ ಮಹಾಸ್ವಾಮಿಗಳು, ಶಿವಪೂಜಿಮಠ, ಕಾಕತಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಅನೇಕ ಭಕ್ತರು, ಹಿರಿಯರು, ಯುವಕರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದರು.
ಈ ಕಾರ್ಯಕ್ರಮದ ಯಶಸ್ಸಿಗೆ ಒಕ್ಕೂಟದ ಸ್ಥಾಪಕ ರಾಜ್ಯಾಧ್ಯಕ್ಷರಾದ ಪ್ರೇಮ್ ಮಲ್ಲಪ್ಪ ಚೌಗುಲ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಆರ್ ಎಕ್ಸ್ ಎಂ ಬಿ, ರಾಜ್ಯ ಖಜಾಂಚಿ ಪ್ರಸಾದ್ ಆರ್ ಹಿರೇಮಠ ಹಾಗೂ ಬೆಳಗಾವಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದ್ದರು.