ನಂದಗಾಂವ ಗ್ರಾಮ ಪಂಚಾಯತಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ
ಸಾವಳಗಿ ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ನೀಡುವ ಜೊತೆಗೆ ಉತ್ತಮ ಭದ್ರತೆ ಮತ್ತು ವಿಶ್ವಾಸ ಒದಗಿಸುವ ಹಿತದೃಷ್ಟಿಯಿಂದಗೋಕಾಕ್ ತಾಲೂಕಿನ.ನಂದಗಾಂವ ಸಾವಳಗಿ ಖಾನಾಪುರ ಮುತ್ನಾಳ ಗ್ರಾಮದಲ್ಲಿ ವಿವಿಧ ಸ್ಥಳಗಳಲ್ಲಿ ಬಸ್ ನಿಲ್ದಾಣ.ಗ್ರಾಮದ ಬಸವೇಶ್ವರ ಸರ್ಕಲ್.ಶಾಲೆಗಳ ಹತ್ತಿರಒಟ್ಟು ಗ್ರಾಮದಲ್ಲಿ ಒಂಬತ್ತು
ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.

ಈ ಮೂಲಕ ಪಂಚಾಯತಿ ವ್ಯಾಪ್ತಿಯಲ್ಲಿ ಹೆಚ್ಚು ಪಾರದರ್ಶಕವಾಗಲಿದ್ದು, ಗ್ರಾಮಸ್ಥರಿಗೆ ಸುರಕ್ಷಿತ ವಾತಾವರಣ ಸೃಷ್ಟಿಯಾಗಲಿದೆ. ಗ್ರಾಮದಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಯಲು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಾಪಾಡುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಈ ನೂತನ ವ್ಯವಸ್ಥೆಯ ಕಾರ್ಯಕ್ರಮದಲ್ಲಿ ಸ್ಥಳೀಯ ನಾಯಕರು, ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಪಂಚಾಯತಿ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. “ನಂದಗಾಂವ ಗ್ರಾಮ ಪಂಚಾಯತಿ ಜನರಿಗೆ ಮಾದರಿ ಸೇವೆ ನೀಡುವ ಉದ್ದೇಶದಿಂದ ಹಲವಾರು ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಿಸಿ ಟಿವಿ ಅಳವಡಿಕೆ ಅದರ ಒಂದು ಭಾಗವಾಗಿದೆ” ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎ ಎಮ್.ಮಾಹುತ್
ಕಾರ್ಯಕ್ರಮದಲ್ಲಿ ಹೇಳಿದರು.