ಪ್ರಾಂಶುಪಾಲರನ್ನು ಹೊರ ಹಾಕಲು ಶಾಲೆಯ ನೀರು ಟ್ಯಾಂಕ್ ಗೆ ವಿಷ್ ಹಾಕಿದ ಪಾಪಿಗಳು
ಬೆಳಗಾವಿಯಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹೌದು ಮುಸ್ಲಿಂ ಹೆಡ್ ಮಾಸ್ಟರ್ ವರ್ಗಾವಣೆ
ಮಾಡಲು ಮಕ್ಕಳಿಗೆ ಪಾಪಿಗಳು ವಿಷವಿಟ್ಟ ಘಟನೆ ಬೆಳಕಿಗೆ ಬಂದಿದೆ. ಇದೀಗ ನೀರಲ್ಲಿ ವಿಷ ಹಾಕಿ 41 ಮಕ್ಕಳನ್ನ ಕೊಲ್ಲಲು ಯತ್ನಿಸಿದ ಪಾಪಿಗಳು ಅಂದರ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ. ಜುಲೈ 14ರಂದು ಸರ್ಕಾರಿ ಕಿರಿಯ ಶಾಲೆಯಲ್ಲಿ ಈ ಘಟನೆ ನಡೆದಿತ್ತು.
ಹೆಡ್ ಮಾಸ್ಟರ್ ಸುಲೇಮಾನ್ ಗೋರಿನಾಯಕ್ ಅವರನ್ನ ಶಾಲೆಯಿಂದ ಹೊರ ಹಾಕಲು ಹೀಗೆ ಮಾಡಲಾಗಿದೆ.
ಶಾಲೆಯ ಹೊರಗಿದ್ದ ನೀರಿನ ಟ್ಯಾಂಕ್ ಗೆ ಪಾಪಿಗಳು ವಿಷ ಹಾಕಿ ಬೇರೆಸಿದ್ದು, ಇದನ್ನ ಕುಡಿದ 12ಜನ ಮಕ್ಕಳು ಅಸ್ವಸ್ಥರಾಗಿದ್ದರು. ಇದೀಗ ಇವರಿಗೆ ಚಕಿತ್ಸೆ ನೀಡಲಾಗುತ್ತಿದೆ