ಬಾಗಲಕೋಟೆ : ಒಂದೇ ರಾತ್ರಿ ಮೂರು ಮನೆಗಳ ಕಳ್ಳತನಕ್ಕೆ ಯತ್ನ
ಜಮಖಂಡಿ ತಾಲೂಕು ನಾಗನೂರು ಗ್ರಾಮದಲ್ಲಿ ಒಂದೇ ರಾತ್ರಿಯಲ್ಲಿ ಮೂರು ಮನೆಗಳ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.
ದರೋಡೆಗೆ ಬಂದ ಕಳ್ಳರು ಎಲ್ಲಾ ಮನೆಗಳ ಹತ್ತಿರ ಸುಳಿದಾಡಿದ್ದಾರೆ. ನಂತರ ಒಂದು ಮನೆಯಲ್ಲಿ ಚಿನ್ನಾಭರಣ, ನಗದು ಕದ್ದು ಪರಾರಿಯಾಗಿದ್ದಾರೆ. ಮತ್ತೆರಡು ಮನೆಗಳಲ್ಲೂ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ
.ಉಮೇಶ ಕನಮುಚನಾಳ ಎಂಬುವರ ಮನೆಯಲ್ಲಿ ಕಳ್ಳತನ ಮಾಡಿ 30 ಗ್ರಾಂ ಚಿನ್ನದ ತಾಳಿ, 15 ಸಾವಿರ ರೂ. ದೋಚಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ಸಾಧಿಸಿ ಮನೆಯಲ್ಲಿನ ತಿಜೋರಿ ಮುರಿದು ಕಳ್ಳತನ ಮಾಡಿದ್ದಾರೆ ಚನ್ನಪ್ಪ ಗಲಗಲಿ, ಶ್ರಾವಣಸ್ ಉಪಾಧ್ಯ ಎಂಬುವರ ಮನೆ ಕೀಲಿ ಮುರಿದು ಕಳ್ಳತನಕ್ಕೆ ಖದೀಮರು ಯತ್ನಿಸಿದ್ದಾರೆ. ಸ್ಥಳಕ್ಕೆ ಸಾವಳಗಿ ಪೊಲೀಸರು ಭೇಟಿ ನೀಡಿ ಖದೀಮರ ಪತ್ತೆಗಾಗಿ ಶೋಧ ನಡೆಸಿದ್ದಾರೆ.