ಬೆಲೆ ಕುಸಿದು ರೈತರಲ್ಲಿ ಕಣ್ಣೀರು ತರಿಸಿದ ಉಳ್ಳಾಗಡ್ಡಿ: ಹೆದ್ದಾರಿಯಲ್ಲಿ ಉಳ್ಳಾಗಡ್ಡಿ ಸುರಿದು ರೈತರ ಆಕ್ರೋಶ
ಉಳ್ಳಾಗಡ್ಡಿ ದರ ಕುಸಿತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈರುಳ್ಳಿ ರಾಶಿ ಸುರಿದು “ಈರುಳ್ಳಿ ದರ ಪಾತಳ,
ಕೇಳೋರಿಲ್ಲ ರೈತರ ಗೋಳ” ಎಂದು ಈರುಳ್ಳಿ ಮೇಲೆ ಬಿದ್ದು ಹೊರಳಾಡಿ ರೈತ ಆಕ್ರೋಶ ಹೊರಹಾಕಿದ ಘಟನೆ
ಸೋಮವಾರ ನಡೆದಿದೆ. ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿಯ ಎನ್.ಹೆಚ್. 218
ರ ಪಕ್ಕದಲ್ಲಿರುವ ಬಸವನಬಾಗೇವಾಡಿ ತೋಟಗಾರಿಕೆ ಎಫ್.ಪಿ.ಒ ಆವರಣದಲ್ಲಿ ಸೋಮವಾರ ನಡೆದ ಈರುಳ್ಳಿ ಸವಾಲಿನಲ್ಲಿ ಕನಿಷ್ಠ 800-1000 ರೂ. ಗೆ ಹರಾಜಾಗಬೇಕಿದ ತನ್ನ ಉತ್ತಮ ಗುಣಮಟ್ಟದ ಈರುಳ್ಳಿ ಕೇವಲ 200
ರೂ.ಗೆ ಹರಾಜಾಗಿ ದರ ಕುಸಿತಕ್ಕೆ ಆಕ್ರೋಶಗೊಂಡ ರೋಣಿಹಾಳದ ರೈತರಿಂದ ಹೆದ್ದಾರಿಯಲ್ಲಿ ಈರುಳ್ಳಿ ರಾಶಿ ಸುರಿದು ಉರುಳಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.