ಸಾವಿನಲ್ಲೂ ಸಾರ್ಥಕತೆ ಮೆರೆದ ದತ್ತಾತ್ರೇಯ ಬಾಲಚಂದ್ರ ದೇಶಪಾಂಡೆ
ಮರಣೋತ್ತರ ಚರ್ಮ ಮತ್ತು ದೇಹದಾನ…
ಬೆಳಗಾವಿ ಕ್ಯಾಂಪ್’ ರಹಿವಾಸಿ ದತ್ತಾತ್ರೇಯ ಬಾಲಚಂದ್ರ ದೇಶಪಾಂಡೆ (84) ನಿಧನರಾಗಿದ್ದು, ಚರ್ಮ ಮತ್ತು ದೇಹ ದಾನದ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ
.
ಮೃತರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಬೆಳಗಾವಿ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ಭಂಡಾರಕ್ಕೆ ಚರ್ಮವನ್ನು ದಾನವಾಗಿ ನೀಡಿ ಸುಟ್ಟ ಗಾಯದಿಂದ ಬಳಲುತ್ತಿದ್ದ ರೋಗಿಗಳ ಬದುಕುಳಿಸಲು ಅನುಕೂಲವಾಗುವುದು ಹಾಗೂ ದೇಹವನ್ನು ಹುಬ್ಬಳ್ಳಿಯ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿಗಳು ಮೂರುಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯಕ್ಕೆ ವೈದ್ಯಕೀಯ ವಿದ್ಯಾರ್ಥಿಗಳ ದ್ಯಾನಾರ್ಜನೆಗೆ ದೇಹವನ್ನು ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಪ್ರಾಚಾರ್ಯ ಡಾ.ಎಂ.ಜಿ.ಹಿರೇಮಠ ಹಾಗೂ ಡಾ.ರಾಮಣ್ಣವರ ಟ್ರಸ್ಟ್’ನ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ ದೇಶಪಾಂಡೆ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೃತರಿಗೆ ಪತ್ನಿ,ಇಬ್ಬರು ಪುತ್ರರು ಹಾಗೂ ಅಪರು ಬಂದು ಬಳಗವನ್ನು ಆಗಲಿದ್ದಾರೆ.
ದೇಹದಾನದ ಹಾಗೂ ಅಂಗಾಂಗ ದಾನ ಹೆಚ್ಚಿನ ಮಾಹಿತಿಗಾಗಿ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್’ನ ಮೊಬೈಲ್ ಸಂಖ್ಯೆ ೯೨೪೨೪೯೬೪೯೭ಗೆ ಸಂಪರ್ಕಿಸಬಹುದಾಗಿದೆ.
Laxmi News 24×7