ಬೈಲಹೊಂಗಲ : ನಾಯಿ ಕಚ್ಚಿ ಆರು ತಿಂಗಳ ಬಳಿಕ ವ್ಯಕ್ತಿ ಸಾವು
ನಾಯಿ ಕಡಿದು ಆರು ತಿಂಗಳ ಬಳಿಕ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ತಿಗಡಿ ಗ್ರಾಮದಲ್ಲಿ ನಡೆದಿದೆ
ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ ಎಂಬ ವ್ಯಕ್ತಿ ಮನೆಯಲ್ಲಿ ಸಾಕಿದ್ದ ನಾಯಿಗೆ ಹುಚ್ಚುನಾಯಿಯೊಂದು ಕಚ್ಚಿತ್ತು . ನಂತರ ಆ ಸಾಕು ನಾಯಿಯು ಶಿವಶಂಕರ ಅವರನ್ನು ಕಚ್ಚಿತ್ತು ಚಿಕಿತ್ಸೆ ಪಡೆದುಕೊಳ್ಳದೆ ಅವರು ನಿರ್ಲಕ್ಷ ತೋರಿದ್ದರು.
ಆರು ತಿಂಗಳ ನಂತರ ಇಂದು ಆರೋಗ್ಯದಲ್ಲಿ ಏಕಾಏಕಿ ಏರುಪೇರು ಆದ ಕಾರಣ ಅವರನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಿಸದೆ ಇಂದು ಶಿವಶಂಕರ ಸಾವನ್ನಪ್ಪಿದರು