Breaking News

ಭಿಕ್ಷಾಟನೆ ಹಣದಲ್ಲಿ ಪಾಲು ಕೊಡದ್ದಕ್ಕೆ ಜೊತೆಗಾರ್ತಿಯನ್ನೇ ಬೆತ್ತಲೆ ಮಾಡಿ, ತಲೆ ಬೋಳಿಸಿ ಹಲ್ಲೆ!

Spread the love

ಕಲಬುರಗಿ, ಮಾರ್ಚ್ 16: ಕಲಬುರಗಿ (Kalaburagi) ನಗರದಲ್ಲಿ ಭಯಾನಕ ಮತ್ತು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ದೃಶ್ಯ ನಡೆದಿದೆ. ಮಂಗಳಮುಖಿಯೊಬ್ಬರನ್ನು (Transgender) ಆಕೆಯ ಸಹವರ್ತಿಗಳೇ ಬೆತ್ತಲೆಗೊಳಿಸಿ ಹಲ್ಲೆ ಮಾಡಿ ಕ್ರೌರ್ಯ ಮೆರೆದಿದ್ದಾರೆ.

ಶಿವಾನಿ, ಭವಾನಿ, ಮಾಲಾ, ಶಿಲಾ ಎಂಬ ಮಂಗಳಮುಖಿಯರು ಸೇರಿಕೊಂಡು ಅಂಕಿತಾ ಚವ್ಹಾಣ ಎಂಬ ಮತ್ತೊಬ್ಬ ಮಂಗಳ ಮುಖಿಯ ಮೇಲೆ ಕ್ರೌರ್ಯ ಮೆರೆದಿದ್ದಾರೆ. ತಮ್ಮ ಜೊತೆಯಲ್ಲೇ ನಿತ್ಯವೂ ಭಿಕ್ಷಾಟನೆ ಮಾಡುತ್ತಿದ್ದ ಅಂಕಿತಾ ಎಂಬವರ ಮೇಲೆ ಹಾಡಹಗಲೇ ಏಕಾಕಿ ಹಲ್ಲೆ ಮಾಡಿದ್ದಾರೆ. ಮನಸೋಇಚ್ಛೆ ಥಳಿಸಿರುವ ಆರು ಜನ ಮಂಗಳ ಮುಖಿಯರು, ನಂತರ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿ ಅಂಕಿತಾಳನ್ನು ಬೆತ್ತಲೆ ಮಾಡಿ, ತಲೆಗೂದಲು ಕಟ್ ಮಾಡಿ ಅಮಾನವೀಯವಾಗಿ ವರ್ತಿಸಿದ್ದಾರೆ.

ಇನ್ನು ಈ ರೀತಿಯ ಅಮಾನವೀಯ ಘಟನೆಗೆ ಅಂಕಿತಾ ತನ್ನ ಹಣ ವಾಪಸ್ ಕೇಳಿದ್ದೇ ಕಾರಣವಂತೆ.ಕಳೆದ ಹಲವಾರು ದಿನಗಳಿಂದ ಮಾಲಾ ಎಂಬವರ ಜೊತೆಯಲ್ಲಿ ಇರುತ್ತಿದ್ದ ಅಂಕಿತಾ, ತಾನು ಭಿಕ್ಷಾಟನೆ ಮಾಡಿದ ಹಣವೆಲ್ಲಾ ಮಾಲಾಳಿಗೆ ನೀಡುತ್ತಿದ್ದಳಂತೆ. ಪ್ರತಿ ದಿನ 2-3 ಸಾವಿರ ರೂ. ಹಣ ನೀಡುತ್ತಾ ಬಂದಿದ್ದಾಳೆ. ಸದ್ಯ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದಾಳೆಂದು ಅಂಕಿತಾಅಳಲು ತೋಡಿಕೊಂಡಿದ್ದಾಳೆ. ತನ್ನ ಮೇಲೆ ಹಲ್ಲೆ‌ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ