Breaking News

ಒಂದೇ ಫಾರಂನಲ್ಲಿನ ಮೂರು ಸಾವಿರ ಕೋಳಿಗಳ ಸಾವು

Spread the love

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದುಗ್ಗಾವತಿ ಬಳಿಯ ಖಂಡಿಕೇರಿ ತಾಂಡಾ ನಿವಾಸಿ ಪರಮೇಶ್ ‌ನಾಯ್ಕ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿನ ಮೂರು ಸಾವಿರ ಕೋಳಿಗಳು ಇದ್ದಕ್ಕಿದ್ದಂತೆ ಮೃತಪಟ್ಟಿವೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ತಜ್ಞ ವೈದ್ಯರು ಕೋಳಿಗಳ ಮಾದರಿ ಸಂಗ್ರಹಿಸಿದ್ದಾರೆ.

ಹಕ್ಕಿ ಜ್ವರದ ಲಕ್ಷಣಗಳು ಕಂಡು ಬಂದಿಲ್ಲ. ವಿಷಪುರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಮಾದರಿ ಸಂಗ್ರಹಿಸಲಾಗಿದ್ದು, ಕೋಳಿಗಳ ಸಾವಿಗೆ ನಿಖರ ಕಾರಣ ‌ಪತ್ತೆಗೆ‌ ಕ್ರಮಕೈಗೊಳ್ಳಿತ್ತೇವೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಯುವಕ ಪರಮೇಶ್ ನಾಯ್ಕ ಮೂರು ತಿಂಗಳ ಹಿಂದೆಯಷ್ಟೇ ಕೋಳಿ ಫಾರ್ಮ ಆರಂಭಿಸಿದ್ದರು. ಇದೀಗ, ಇದ್ದಕ್ಕಿದ್ದಂತೆ ಮೂರು ಸಾವಿರ ಕೋಳಿ ಮೃತಪಟ್ಟಿದ್ದು, ಆತಂಕ ಶುರುವಾಗಿದೆ.

ಕೋಳಿ ಫಾರ್ಮ ಆರಂಭಿಸಿ ಸ್ವಾವಲಂಭಿ ಬದುಕು ನಡೆಸಲು ಮುಂದಾಗಿದ್ದ ಯುವಕ ಕೋಳಿಗಳ ಸಾವಿನಿಂದ ಶಾಕ್ ಆಗಿದ್ದಾರೆ.


Spread the love

About Laxminews 24x7

Check Also

ಗಮನ ಸೆಳೆಯುತ್ತಿದೆ ವಿಸ್ಮಯಕಾರಿ ಕೀಟ ಪ್ರಪಂಚ

Spread the loveಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ‌ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಹಲವು ಬಗೆಯ ಮೇಳಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ