ರೈತರ ಬೆಳೆಗೆ ನಿಜವಾದ ಬೆಲೆ ಸಿಕ್ಕಾಗ ಮಾತ್ರ ರೈತರಿಗೆ ಸ್ವಾತಂತ್ರ್ಯ ಸಿಕ್ಕ ಹಾಗೆ: ಚೂನಪ್ಪ ಪೂಜೇರಿ
ಗೋಕಾಕ ತಾಲೂಕಿನ ಕೊಣ್ಣೂರಿನ ನಗರಸಭೆಯ ಆವರಣದಲ್ಲಿ ನೂತನವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಣ್ಣೂರ ಘಟಕವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಇವರು ನಾಮಫಲಕ ಮತ್ತು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿದರು.
ಕೊಣ್ಣೂರಿನ ರೈತ ಸಂಘಟನೆಯ ಪದಾದಿಕಾರಿಗಳಿಗೆ ರೈತ ದೀಕ್ಷಾ ನೀಡಿ ಉದ್ಗಾಟಿಸಿ ಮಾತನಾಡಿದ ರಾಜ್ಯಾದಕ್ಷ ಚೂನಪ್ಪ ಪೂಜೇರಿ ಇವರು ರೈತರಾದ ನಾವು ಬಹುಸಂಖ್ಯಾರಿದ್ದೇವೆ, ಸ್ವಾಂತಂತ್ರ್ಯ ಸಿಕ್ಕಿ78 ವರ್ಷಗಳಾದರೂ ಕೂಡ ಬಹುಸಂಖ್ಯಾತರಾದ ರೈತರ ಬೆಳೆಗೆ ಬೆಲೆ ಸಿಕ್ಕಿಲ್ಲ, ಅದರಿಂದ ರೈತರೆಲ್ಲರೂ ಆರ್ಥಿಕವಾಗಿ ಹಿಂದೂಳಿದ್ದೇವೆ.ಅರ್ದ ಗಂಟೆಗೊಮ್ಮೆ ಗಂಟೆಗೊಮ್ಮೆ ರೈತ ಆತ್ಮ ಹತ್ಯೆ ಮಾಡಿಕೊಳ್ಳುವ ಸಂದರ್ಭ ಒದಗಿದೆ.
ನೌಕರಸ್ಥರಿಗೆ ವೇತನವಿದ್ದರೂ ಹೆಚ್ಚಿನ ವೇತನಕ್ಕಾಗಿ ಪ್ರತಿಭಟನೆ ಮಾಡಿ ವೇತನ ಹೆಚ್ಚಿಗೆ ಮಾಡಿಕೊಂಡರು, ಆದರೆ ನಮಗೆ 78 ವರ್ಷಗಳಾದರೂ ಬೆಳೆಗೆ ಬೆಲೆನೆ ಇಲ್ಲಾಕಾರ್ಯಾಂಗ, ನ್ಯಾಯಾಂಗ ಶಾಸಕಾಂಗ, ರೈತರ ಪಾಲಿಗೆ ಇಲ್ಲದಂತಾಗಿವೆ, ನ್ಯಾಯವಾದಿಗಳು ರೈತರ ಬೆಳೆಗೆ ಬೆಲೆ ನಿಗದಿಪಡಿಸುವಂತೆ ಪ್ತತಿಭಟನೆ ಮಾಡಬೇಕಾಗಿತ್ತು ಆದರೆ ಅವರು ಕೂಡ ಇಲ್ಲಾ ,ನಾವೆ ಹೊರಾಟ ಮಾಡಬೇಕಾಗಿದೆ ಅದಕ್ಕಾಗಿ ನಾವು ಸಂಘಟನೆ ಮಾಡಬೇಕಾಗಿದೆ.ನಮ್ಮ ಬೆಳೆಗೆ ನಿಜವಾದ ಬೆಲೆ ಸಿಕ್ಕಾಗ ಮಾತ್ರ ರೈತರಿಗೆ ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಮಾರ್ಮಿಕವಾಗಿ ಹೇಳಿದರು.
ಇನ್ನು ರಾಜ್ಯ ಗೌರವಾದಕ್ಷ ಶಶಿಕಾಂತ ಪಡಸಲಗಿ ಮಾತನಾಡಿ ಹಗಲು ರಾತ್ರಿ ಬೇವರು,ರಕ್ತ,ಸುರಿಸಿ ಅಣ್ಣ ಹಾಕುವ ರೈತನ ಬೆಳೆಗೆ ಬೆಲೆ ಪಡೆದುಕೊಳ್ಳಲು ಸರಕಾರದ ವಿರುದ್ದ ನಮ್ಮ ಹೊರಾಟ ಅವಶ್ಯವಾಗಿದೆ, ಒಗ್ಗಟ್ಟಾಗಿ ಹೊರಾಟ ಮಾಡಿದರೆ ಸರಕಾರದ ಸೌಲಬ್ಯಗಳು ಮನೆ ಬಾಗಿಲಗೆ ಬರುತ್ತವೆ,ಆದರೆ ನಮ್ಮಲ್ಲಿ ಬೇದ ಭಾವ ಇರುವದರಿಂದ ಸಂಘಟಿತರಾಗಲು ಆಗುತ್ತಿಲ್ಲ,ರೈತರಾದ ನಾವೆ ರೈತ ಮಕ್ಕಳಿಗೆ ಮಗಳನ್ನು ಕೊಡುತ್ತಿಲ್ಲ,ಬೇರೆಯವರು ಹೇಗೆ ಕೊಡುತ್ತಾರೆ,ರೈತ ಮಕ್ಕಳಿಗೆ ಮಗಳನ್ನು ಕೊಡುವುದರ ಮೂಲಕ ಮೊದಲು ನಾವು ಬದಲಾಗಬೇಕು ಹೊರಾಟದ ಕಿಚ್ಚು ನಮ್ಮಲ್ಲಿ ಬರಬೇಕೆಂದರು.
ವೇದಿಕೆ ಮೇಲೆ ಹಲವಾರು ರೈತರನ್ನು ಸನ್ಮಾನಿಸಿ ಸತ್ಕರಿಸಿದರು.ನೂತನ ಅದ್ಯಕ್ಷ ಜಿನ್ನಪ್ಪ ಬೊರಗಲ್ಲೆ,ಉಪಾದಕ್ಷ ಕುಮಾರ ಬೆಳವಿ ಸೇರಿದಂತೆ ಇನ್ನೂಳಿದ ಪದಾದಿಕಾರಿಗಳಿಗೆ ರೈತ ಶಾಲು ಹೊದಿಸಿ ಶುಭ ಹಾರೈಸಿದರು.ನ್ಯಾಯವಾದಿ ರಮೇಶ ಈರನಟ್ಟಿ ಇವರು ಎಲ್ಲರನ್ನು ಸ್ವಾಗತಿಸಿ,ನಿರೂಪಿಸಿದರು.
ಈ ಸಂದರ್ಬದಲ್ಲಿ ಪ್ರವೀಣ ಗುಡ್ಡಾಕಾಯು,ತಾಲೂಕಾ ಅದ್ಯಕ್ಷ ಮಂಜುನಾಥ ಪೂಜೇರಿ, ಲಾಲಸಾಬ ಶಿವಾಪುರ, ಸಿದಲಿಂಗ ಪೂಜಾರಿ, ನೇಮಿನಾಥ ಚೌಗಲಾ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು