Breaking News

ಕಾರ್ಖಾನೆ ಅಗ್ನಿ ದುರಂತ: ಸ್ಪಷ್ಟ ವರದಿಗೆ ಎಸ್.ಕೆ.ವಂಟಿಗೋಡಿ ಸೂಚನೆ

Spread the love

ಬೆಳಗಾವಿ: ‘ತಾಲ್ಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯಲ್ಲಿ ಈಚೆಗೆ ಸಂಭವಿಸಿದ ಅಗ್ನದುರಂತದಲ್ಲಿ ಮೃತಪಟ್ಟ ಕಾರ್ಮಿಕನ ದೇಹದ ಅವಶೇಷಗಳನ್ನು ಗೌರವದಿಂದ ನೀಡಿಲ್ಲ ಎಂಬ ಸಂಗತಿ ಮಾಧ್ಯಮಗಳಿಂದ ಗೊತ್ತಾಯಿತು. ಇಂಥ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.

 

ಕಾರ್ಖಾನೆಗೆ ಸೋಮವಾರ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ‘ಘಟನೆ ಕುರಿತು ಪತ್ರಿಕೆಗಳ ವರದಿ ಆಧರಿಸಿ ಪರಿಶೀಲಿಸಲು ಬಂದಿರುವೆ. ಘಟನೆ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯ ವ್ಯಕ್ತವಾಗಿವೆ. ಅಧಿಕಾರಿಗಳು ನಿರ್ಲಕ್ಷ್ಯ ತೋರದೆ, ಸ್ಪಷ್ಟ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.

‘ಮೃತ ವ್ಯಕ್ತಿಯ ದೇಹದ ಅವಶೇಷಗಳನ್ನು ಮಡಕೆಯಲ್ಲಿ ಹಾಕಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಲು ಯತ್ನಿಸಿದರು.

ಇದಕ್ಕೆ ಪ್ರತಿಕ್ರಯಿಸಿದ ಒಂಟಗೋಡಿ ಅವರು, ‘ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಬಾರದು. ಮೃತರ ಕುಟುಂಬಕ್ಕೆ ಅಂಬ್ಯುಲೆನ್ಸ್ ಮೂಲಕ ಮೃತ ದೇಹ ಹಸ್ತಾಂತರಿಸಬೇಕು. ಕರ್ತವ್ಯ ನಿರ್ವಹಣೆ ಜೊತೆಗೆ ಮಾನವೀಯತೆ ಮರೆಯಬಾರದು’ ಎಂದರು.

ದುರಂತದಲ್ಲಿ ಮೃತಪಟ್ಟ ಯಲಗೊಂಡ ಸಣ್ಣಯಲ್ಲಪ್ಪ ಗುಂಡ್ಯಾಗೋಳ (20) ಅವರ ದೇಹದ ಅವಶೇಷಗಳನ್ನು ಮಡಕೆಯಲ್ಲಿಟ್ಟು ಕೈಚೀಲದಲ್ಲಿ ಹಾಕಿ ಮೃತನ ಹೆತ್ತವರ ಕೈಗೆ ಕೊಡಲಾಗಿತ್ತು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರು ಭೇಟಿ ನೀಡಿದರು. ಆದರೆ, ಅಧಿಕಾರಿಗಳು ಮಾಧ್ಯಮದವರನ್ನು ದೂರವಿಟ್ಟು ಸಭೆ ನಡೆಸಿದರು.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ