Breaking News

ಬೆಂಗಳೂರಿನಲ್ಲಿ ರಮೇಶ್ ಜಾರಕಿಹೋಳಿ ಭೇಟಿಯಾದ ಪ್ರಭಾಕರ್ ಕೋರೆ

Spread the love

ಬೆಳಗಾವಿ- ಬೆಂಗಳೂರಿನ ಸದಾಶಿವನಗರ ದಲ್ಲಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಮನೆ ಈಗ ಸೂಪರ್ ಪಾವರ್ ಸೆಂಟರ್ ಆಗಿ ಪರಿವರ್ತನೆ ಆಗಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆ,ಸದಾಶಿವ ನಗರದ ರಮೇಶ್ ಸಾಹುಕಾರ್ ಮನೆಯಲ್ಲಿ ನಡೆಯುತ್ತಿರುವ ಮೀಟೀಂಗ್ ಗಳು,ಅವರ ಮನೆಗೆ ಗಣ್ಯರ ಭೇಟಿ,ರಮೇಶ್ ಜಾರಕಿಹೊಳಿ ಅವರ ಪದೇ,ಪದೇ ದೆಹಲಿಗೆ ಭೇಟಿ ಈ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಹುಕಾರ್ ಮನೆ ಈಗ ಸೂಪರ್ ಪಾವರ್ ಸೆಂಟರ್ ಆಗಿದೆ ಅನ್ನೋದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ಇತ್ತೀಚಿಗಷ್ಟೇ ನಿರಾಣಿ,ರೇಣುಕಾಚಾರ್ಯ,ಸೇರಿದಂತೆ ಬಿಜೆಪಿಯ ಅನೇಕ ಜನ ಶಾಸಕರು ಘಟಾನುಘಟಿಗಳು ರಮೇಶ್ ಜಾರಕಿಹೊಳಿ ಅವರ ಮನೆಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ಬೆನ್ನಲ್ಲಿಯೇ ,ಲಿಂಗಾಯತ ಸಮುದಾಯದ ಪವರ್ ಫುಲ್ ಲೀಡರ್,ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ,ಹಾಗೂ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಅವರು ಇಂದು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಕುರಿತು ಚರ್ಚೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮಾಜಿ ರಾಜ್ಯಸಭಾ ಸದಸ್ಯ, ಕೆ ಎಲ್ ಇ ಸಂಸ್ಥೆಯ ಕಾರ್ಯಾದ್ಯಕ್ಷ ಡಾ. ಪ್ರಭಾಕರ ಕೋರೆ ಅವರೂ ಬಿಜೆಪಿಯ ಆಕಾಂಕ್ಷಿಯಾಗಿದ್ದಾರೆ,ಅವರೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ‌.ಎಂದು ಹೇಳಲಾಗಿದ್ದು,ಪ್ರಭಾಕರ ಕೋರೆ ಅವರು ಬಿಜೆಪಿ ಟಿಕೆಟ್ ತಮಗೆ ನೀಡುವಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ,ಅಮೀತ ಶಾ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ