Breaking News

ವಿವಾದದ ಸುಳಿಯಲ್ಲಿ ನಟ ದರ್ಶನ್‌ ಬಂಧಿಸಿದ್ದACP ಚಂದನ್‌ ಕುಮಾರ್‌.

Spread the love

ಬೆಂಗಳೂರು: ನಟ ದರ್ಶನ್ ಬಂಧಿಸಿ ಸುದ್ದಿಯಾಗಿದ್ದ ಎಸಿಪಿ ಚಂದನ್‌ ಕುಮಾರ್‌ ವಿರುದ್ದ ಕೆಲ ಆರೋಪಗಳು ಕೇಳಿ ಬರುತ್ತಿವೆ. ನಟ ದರ್ಶನ್‌ ಬಂಧನವಾದ ಬೆನ್ನಲೇ ಸುದ್ದಿಯಾಗಿರುವ ಎಸಿಪಿ ಚಂದನ್‌ ಕುಮಾರ್ ಈಗ ದಲಿತ ವಿರೋಧಿ ಎನ್ನುವ ಆರೋಪ ಕೇಳಿ ಬಂದಿದ್ದು, ಚಂದನ್‌ ಅವರ ಬಗ್ಗೆ ಕೇಳಿ ಬರುತ್ತಿರುವ ಆರೋಪ ಇನ್ನೂ ಸಾಬೀತಾಗಿಲ್ಲ.

ಎಸಿಪಿ ಚಂದನ್‌ ಕುಮಾರ್ ಅವರ ಬಗ್ಗೆ ಹರಿರಾಮ್ ಎ ಎನ್ನುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.ವಿವಾದದ ಸುಳಿಯಲ್ಲಿ ನಟ ದರ್ಶನ್‌ ಬಂಧಿಸಿದ್ದACP ಚಂದನ್‌ ಕುಮಾರ್‌..! ⦁

ಈತನು ತಾನು ಹೀರೋ ಎಂದು ಭಾವಿಸಿಕೊಂಡು ರಾಜಾರೋಷವಾಗಿ ಕಾನೂನು ವಿರೋಧಿ ಹಾಗು ಮಾನವಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿರುವುದು ಖಂಡನೀಯ, ಇತ್ತೀಚೆಗೆ ಡಾ.ಬಾಬು ಜಗಜೀವನ್ ರಾಮ್ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಲಿತ ಹೋರಾಟಗಾರ PTCL ಮಂಜುರವರು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಬೇಟಿ ಮಾಡಿ PTCL ಕಾಯ್ದೆಗೆ ಸಂಭಂದಸಿದ ಸಮಸ್ಯೆಗಳನ್ನು ಹೇಳುತ್ತಿರಲು ಏಕಾಕಿ ಪೋಲೀಸರು ಮಂಜು ಮತ್ತು ಇತರರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ ಬಹಳ ಅಮಾನವೀಯವಾಗಿ ನಡೆದು ಕೊಂಡಿದ್ದು ನಂತರ ಠಾಣೆಗೆ ಬಂದ ACP ಚಂದನ್ ಅಲ್ಲಿದ್ದ ದಲಿತ ಹೋರಾಟಗಾರರು ಹಾಗು ವಕೀಲರಾದ ವೇಣುರವರನ್ನು ಏಕವಚನದಲ್ಲಿ ಬೈದು ದಮ್ಕಿ ಹಾಕಿ ನಂತರ FIR ದಾಖಲಿಸಿದ್ದಾರೆ , ಮುಖ್ಯಮಂತ್ರಿ ಯವರನ್ನು ಬೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಹೇಳುವುದು ಈತನಿಗೆ ಅಪರಾಧವಂತೆ !

ಅಂದ ಹಾಗೇ ಕೆಲವು ಮಾಧ್ಯಮಗಳು ಕೂಡ ಕೆಲವು ಪೊಲೀಸ್‌ ಅಧಿಕಾರಿಗಳನ್ನು ರಿಯಲ್‌ ಸಿಗಂ, ಮಗಂ ಅನ್ನೋ ರೀತಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದಕ್ಕೆ ಸಾರ್ವಜನಿಕರು ವಿರುದ್ದ ಕಿಡಿಕಾರುತ್ತಿದ್ದಾರೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ