Breaking News

ಉಡುಪಿ ಗ್ಯಾಂಗ್ ವಾರ್ ಬೆನ್ನಲ್ಲೇ ಕೋಲಾರದಲ್ಲೂ ಆತಂಕಕಾರಿ ಘಟನೆ

Spread the love

ಉಡುಪಿ ಗ್ಯಾಂಗ್ ವಾರ್ ಬೆನ್ನಲ್ಲೇ ಕೋಲಾರದಲ್ಲೂ ಆತಂಕಕಾರಿ ಘಟನೆ

ಕೋಲಾರ, ಮೇ 27: ಉಡುಪಿಯಲ್ಲಿ ನಡೆದ ಭೀಕರ ಗ್ಯಾಂಗ್ ವಾರ್​​ (Udupi Gangwar) ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಜನತೆ ಭೀತಿಗೊಂಡಿರುವ ಸಂದರ್ಭದಲ್ಲೇ ಕೋಲಾರದಲ್ಲಿ (Kolar) ಯುವಕನೊಬ್ಬ ಮಾರಕಾಸ್ತ್ರ (Weapon) ಹಿಡಿದು ಜನರಲ್ಲಿನ ಭಯ ಹುಟ್ಟಿಸಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, 27 ವರ್ಷ ವಯಸ್ಸಿನ ಸಂದೀಪ್ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ತಲ್ವಾರ್ ವಶಕ್ಕೆ ಪಡೆಯಲಾಗಿದೆ.

ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ, ಜನರ ನೆಮ್ಮದಿಗೆ ಭಂಗ ತರುವ ಮತ್ತು ಗಲಭೆ ಸೃಷ್ಟಿ ಮಾಡುವ ಉದ್ದೇಶದಿಂದ ಸಂದೀಪ್ ಲಾಂಗ್ ಹಿಡಿದು ಪೋಸ್ ಕೊಡುತ್ತಿದ್ದ ಎನ್ನಲಾಗಿದೆ ಎಂದು ಮುಳಬಾಗಲು ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ತಡರಾತ್ರಿ 2 ಗಂಟೆಯ ಹೊತ್ತಿಗೆ ಎರಡು ಗ್ಯಾಂಗ್​ಗಳ ಮಧ್ಯೆ ಭೀಕರ ಕಾಳಗ ನಡೆದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ವೈರಲ್ ಆಗಿತ್ತು. ಇಂಥ ಕೃತ್ಯಗಳು ಹಾಗೂ ವಿಡಿಯೋಗಳಿಂದ ಪ್ರಚೋದನೆ ಪಡೆದು ರಾಜ್ಯದ ಇತರ ಕಡೆಗಳಲ್ಲಿಯೂ ಯುವಕರು ಇಂಥ ಕೃತ್ಯಕ್ಕೆ ಇಳಿಯುತ್ತಿರುವುದು ಇದೀಗ ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ