Breaking News
Home / Uncategorized / ರಾಜ್ಯಕ್ಕೆ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿB.J.P. ಪ್ರಕಟನೆ

ರಾಜ್ಯಕ್ಕೆ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿB.J.P. ಪ್ರಕಟನೆ

Spread the love

ಬೆಂಗಳೂರು: ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಕುಸಿಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ಇದೀಗ ರಾಜ್ಯಕ್ಕೆ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟನೆ ಹೊರಡಿಸುವ ಮೂಲಕ ಸರಕಾರವನ್ನು ಕೆಣಕಿದೆ.

ಕರುನಾಡಿನ ಶಾಂತಿಗೆ ಬೆಂಕಿ ಬಿದ್ದಿದೆ.Karnataka ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ: ಬಿಜೆಪಿ

ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರು, ಹೆಣ್ಣುಮಕ್ಕಳು ನಿರ್ಭೀತಿಯಿಂದ ಓಡಾಡುವುದಕ್ಕೆ ಗ್ಯಾರಂಟಿ ಕೊಡುವ ದಕ್ಷ ಗೃಹ ಸಚಿವರು ಬೇಕಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.

ಅಪರಾಧಿಗಳಿಗೆ ಶ್ರೀರಕ್ಷೆ- ಅಮಾಯಕರಿಗೆ ಶಿಕ್ಷೆ. ರಕ್ತ ಸಿಕ್ತ ಕೈನಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಪರಾಧಗಳು ಜರಗಿವೆ. ಗೂಂಡಾ ರಾಜ್ಯವಾಗಿದೆ. ಕೊಲೆ, ಸುಲಿಗೆ, ಅತ್ಯಾಚಾರ, ಗೂಂಡಾಗಿರಿ, ಭಯೋತ್ಪಾದನೆಯ ಗ್ಯಾರಂಟಿಯನ್ನು ಕಾಂಗ್ರೆಸ್‌ ಸರಕಾರ ಯಾವುದೇ ಅಡೆತಡೆಗಳು ಇಲ್ಲದೆ ಜಾರಿ ಮಾಡಿದೆ. ಪರಿಣಾಮ ಕಳೆದ 4 ತಿಂಗಳಲ್ಲೇ 430 ಕೊಲೆಗಳು ನಡೆದಿವೆ.

ಇನ್ನೂ ಸುಲಿಗೆ, ಅತ್ಯಾಚಾರ, ಪೋಕ್ಸೋ, ಗಲಭೆ ಇತ್ಯಾದಿಗಳ ಲೆಕ್ಕವೇ ಬೇರೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಖುದ್ದು ಒಂದಿಷ್ಟು ಗಲಭೆಗಳನ್ನು ಸೃಷ್ಟಿಸಿದೆ. ಹನುಮ ಧ್ವಜ, ಹಿಂದೂಗಳ ಮೇಲೆ ಕೇಸ್‌, ಹಿಂದೂಗಳ ಬಂಧನ, ರಾಮನಗರ ವಕೀಲರ ಪ್ರಕರಣಗಳಲ್ಲಿ ಸರಕಾರವೇ ಕೈ ಮಿಲಾಯಿಸಿದೆ ಎಂದು ಬಿಜೆಪಿ ಆರೋಪಿಸಿದೆ


Spread the love

About Laxminews 24x7

Check Also

ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

Spread the love ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ದಿನವನ್ನು ವಿರೋಧಿಸಿ, ಕಾಂಗ್ರೆಸ್ ಕ್ಷಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ