ರಾಯಚೂರು: ರಾಯಚೂರಿನಲ್ಲಿ ತಾಪಮಾನ ಹೆಚ್ಚಳವಾಗಿರುವುದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ್ (G. Kumar Nayak) ಪಾತ್ರವಿದೆ ಎಂದು ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ (Raja Amareshwar Nayak) ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್, ಪವರ್ ಗ್ರಿಡ್‌ನಿಂದ ನಮಗೆ ಶಾಖ ಹೆಚ್ಚಾಗಿದೆ.ಜಿಲ್ಲೆಗೆ ವೈಟಿಪಿಎಸ್ ತಂದವರು ಈಗಿನ ಕಾಂಗ್ರೆಸ್ ಅಭ್ಯರ್ಥಿ ಜಿ ಕುಮಾರ್ ನಾಯಕ್. ಇದು ಜಿ. ಕುಮಾರ್ ನಾಯಕ್ ಜನರಿಗೆ ಕೊಟ್ಟಂತ ಕಾಣಿಕೆ. ಕುಮಾರ್ ನಾಯಕ್ ಡಿಸಿ ಇದ್ದಾಗ, ಕೆಪಿಸಿಲ್ ಎಂ.ಡಿ ಆಗಿದ್ದಾಗ ಇವು ಬಂದಿವೆ. ಬೇರೆ ಜಿಲ್ಲೆ ಜನ ಪರಿಸರ ಕೆಡುತ್ತೆ ಅಂತ ತಿರಸ್ಕಾರ ಮಾಡಿದ್ದ ಪವರ್ ಗ್ರಿಡ್, ಶಾಖೊತ್ಪನ್ನ ಕೇಂದ್ರ ಜಿಲ್ಲೆಗೆ ಬಂದಿವೆ ಎಂದು ಕಿಡಿಕಾರಿದರು.
ಕಲ್ಲಿದ್ದಲು ಸುಟ್ಟು ವಿದ್ಯುತ್ ಉತ್ಪಾದಿಸುತ್ತಿರುವುದರಿಂದ ಜಿಲ್ಲೆಯ ತಾಪಮಾನ ಹೆಚ್ಚಾಗಿದೆ. ಇಷ್ಟು ಬಿಸಿಲು ಅನುಭವಿಸಲು ಜಿ. ಕುಮಾರ್ ನಾಯಕ್ ಕಾರಣ ಎಂದು ಹೇಳಿದರು.
Laxmi News 24×7