Breaking News

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್: ಉಸಿರು ಬಿಗಿಹಿಡಿದುಕೊಂಡು ಕಾಯುತ್ತಿರುವ ಭಾರತ,

Spread the love

ನವದೆಹಲಿ: ಇಸ್ರೋ ಚಂದ್ರಯಾನ-3ರ ಸಾಫ್ಟ್ ಲ್ಯಾಂಡಿಂಗ್​ ಕಾರ್ಯಾಚರಣೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ಇಂದು (ಬುಧವಾರ) ಸಂಜೆ 5.20ಕ್ಕೆ ನೇರ ಪ್ರಸಾರ ಪ್ರಾರಂಭವಾಗುತ್ತದೆ. ದೇಶದ ಚಂದ್ರಯಾನ-3 ಮಿಷನ್​ನ ಮೇಲೆ ನಿರೀಕ್ಷೆಗಳು ಗಗನಕ್ಕೇರಿವೆ. ಇಸ್ರೋದ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ನಿರ್ಧರಿಸಿರುವುದರಿಂದ ದೇಶಾದ್ಯಂತ ತಾರಾಲಯಗಳು, ಶಿಕ್ಷಣ ಸಂಸ್ಥೆಗಳು ಮತ್ತು ವಿವಿಧ ಸಂಸ್ಥೆಗಳು ಇಂದು ದೊಡ್ಡ ಕ್ಷಣಕ್ಕಾಗಿ ತಯಾರಿ ನಡೆಸುತ್ತಿವೆ.

ಶಾಲಾ-ಕಾಲೇಜುಗಳಲ್ಲಿ ಐತಿಹಾಸಿಕ ಕ್ಷಣದ ನೇರ ಪ್ರಸಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ವಿಜ್ಞಾನಿಗಳು ಮತ್ತು ಶಿಕ್ಷಕರು ಕಾರ್ಯಾಚರಣೆಯ ಒಳನೋಟಗಳನ್ನು ಪ್ರಸ್ತುತಪಡಿಸಲಿದ್ದಾರೆ. ಜೊತೆಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ನಡೆಯಲಿರುವ ಘಟನೆಯ ಮಹತ್ವವನ್ನು ವಿವರಿಸುತ್ತಾರೆ.

ಚಂದ್ರಯಾನ-3 ಕುರಿತು ಕಾರ್ಯಾಗಾರ: ದೆಹಲಿಯ ಇಂದಿರಾಗಾಂಧಿ ತಾರಾಲಯವು ಇಂದು ಕೌನ್ಸಿಲ್ ಆವರಣದಲ್ಲಿ ಚಂದ್ರಯಾನ-3 ಕುರಿತು ಕಾರ್ಯಾಗಾರವನ್ನು ಆಯೋಜಿಸಿದೆ. ಕೌನ್ಸಿಲ್ ಆವರಣದಲ್ಲಿ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಕಾರ್ಯಾಗಾರ ನಡೆಯಲಿದೆ. ಈ ಕಾರ್ಯಾಗಾರದಲ್ಲಿ, ರಿಮೋಟ್ ಸೆನ್ಸಿಂಗ್ ಮತ್ತು ಅಪ್ಲಿಕೇಶನ್‌ಗಳ ಕೇಂದ್ರದ ವಿಜ್ಞಾನಿ ಡಾ.ಅನಿರುದ್ಧ್ ಉನಿಯಾಲ್ ಅವರು ಚಂದ್ರನ ಒಳನೋಟ ಹಾಗೂ ಸಂಯೋಜನೆ ಕುರಿತು ಉಪನ್ಯಾಸವನ್ನು ನೀಡಲಿದ್ದಾರೆ.

ಇದಲ್ಲದೇ, ಇಂದಿರಾ ಗಾಂಧಿ ತಾರಾಲಯವು ಚಂದ್ರಯಾನ-3 ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಪ್ಲಾನೆಟೋರಿಯಂ ಸಭಾಂಗಣದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಸಮಯದಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ತೊಡಗಿಸಿಕೊಳ್ಳಲು ಅವಕಾಶ ಒದಗಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಲ್ಯಾಂಡಿಂಗ್ ಕಾರ್ಯಾಚರಣೆಯ ನೇರ ಪ್ರಸಾರ ಏಲ್ಲಿ ವೀಕ್ಷಿಸಬೇಕು?: ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರವು ಬುಧವಾರ ಸಂಜೆ 5.20ಕ್ಕೆ ಪ್ರಾರಂಭವಾಗುತ್ತದೆ. 2023 ಆಗಸ್ಟ್ 5.27ರಿಂದ ಇಸ್ರೋ (ISRO) ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಫೇಸ್​ಬುಕ್​ (Facebook) ಮತ್ತು ಸಾರ್ವಜನಿಕ ಪ್ರಸಾರಕ ಡಿಡಿ ನ್ಯಾಷನಲ್ ಟಿವಿಯಲ್ಲಿ ಲ್ಯಾಂಡಿಂಗ್‌ನ ನೇರಪ್ರಸಾರ ಲಭ್ಯವಿರುತ್ತದೆ. ಭಾರತವು ಈ ಸಾಧನೆ ಮಾಡಿದ ನಂತರ ವಿಶ್ವದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ. ಯುನೈಟೆಡ್ ಸ್ಟೇಟ್ಸ್, ರಷ್ಯಾ ಮತ್ತು ಚೀನಾ ಚಂದ್ರನನ್ನು ತಲುಪಿವೆ. ಆದರೆ, ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಏಕೈಕ ದೇಶ ಕೀರ್ತಿಗೆ ಪಾತ್ರವಾಗಿದೆ.

ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಹಾಗೂ ನಿರ್ಣಯಕ್ಕೆ ಸಾಕ್ಷಿ ಆಗಲಿದೆ. ಲ್ಯಾಂಡರ್ ‘ವಿಕ್ರಮ್’ ಮತ್ತು ‘ರೋವರ್ ಪ್ರಗ್ಯಾನ್’ ಒಳಗೊಂಡಿರುವ ಎಲ್​ಎಂ, ಚಂದ್ರನ ಭೂಪ್ರದೇಶದಲ್ಲಿ ಅತ್ಯಂತ ಸುರಕ್ಷಿತವಾಗಿ ಹಗುರವಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯುವ ಮೂಲಕ ನೂತನ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಇಂದು (ಬುಧವಾರ) ಸಂಜೆ 6.04 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್ ಚಂದ್ರನಲ್ಲಿ ಲ್ಯಾಂಡ್​ ಆಗಲಿದೆ.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ