ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹಿನ್ನೆಲೆ ಕಳೆದ ಏಂಟು ತಿಂಗಳಿಂದ ಬಂದ ಆಗಿರುವ ರಾಜ್ಯದ ಶಾಲೆಗಳು ಮುಂದಿನ ವಾರದಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು, ತಜ್ಞರೊಂದಿಗೆ ಈ ಕುರಿತು ಸಭೆ ನಡೆಸಲು ತಯಾರಿ ನಡೆಸಿದ್ದಾರೆ.
ನವೆಂಬರ್ 4, 5, 6 ನೇ ದಿನಾಂಕದಂದು ಸಭೆ ನಡೆಸಲಿದ್ದಾರೆ. ಸತತ ಮೂರು ದಿನಗಳು ಸಭೆ ನಡೆಸಿ, ಶಾಲೆ ಆರಂಭದ ಬಗ್ಗೆ ಚರ್ಚಿಸಿದ ಬಳಿಕ ಶಾಲೆಗಳನ್ನು ಆರಂಭಿಸಲಾಗುತ್ತದೆ.
ಕೆಲವು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ದಾಖಲಾತಿ ಹೆಚ್ಚಳವನ್ನು ಪರಿಗಣಿಸಿ ಶಾಲೆಗೆ ಸೌಲಭ್ಯ ನೀಡಲಾಗುತ್ತದೆ. ಶಾಲೆಯ ಸ್ವಚ್ಛತೆ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಎಲ್ಲ ತಯಾರಿಗಳನ್ನು ಮಾಡಿಕೊಂಡು, ಶಿಕ್ಷಕರಿಗೆ ಬಿಸಿ ನೀರಿನ ವ್ಯವಸ್ಥೆ ಸೇರಿ ಹಲವು ಸೌಲಭ್ಯ ನೀಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
Laxmi News 24×7