Breaking News

ನಮ್ಮ ಕರ್ನಾಟಕದ ಸಚಿವರಾದ ವೀ ಸೋಮಣ್ಣ ಹಾಗೂ ಶ್ರೀ ರಾಮ ಲು ಅವರಿಗೆ ಕನ್ನಡದ ಬಗ್ಗೆ ಜ್ಞಾನ ಇಲ್ಲ ಯಾರ ಯಾರದೋ ಹೆಸರು ಹೇಳಿ ಭಾಷಣ ಮಾಡಿದ ಸಚಿವರೂ.

Spread the love

ಕೊಡಗು:  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಭಾಷಣದಲ್ಲಿ ಸಚಿವ ವಿ.ಸೋಮಣ್ಣ ಯಡವಟ್ಟು ಮಾಡಿಕೊಂಡಿದ್ದು,  ಕವಿ  ಕುಮಾರವ್ಯಾಸನ ಬದಲು ಕುಮಾರಸ್ವಾಮಿ ಅವರನ್ನು ಹಾಡಿಹೊಗಳಿದ ಪ್ರಸಂಗ ನಡೆದಿದೆ.

By fielding B Sriramulu from Chitradurga, can the BJP storm the Congress  stronghold? | The News Minute 

ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ, ಕರ್ನಾಟಕದ ಕವಿಗಳ ಸಾಲಿನಲ್ಲಿ ಕುಮಾರಸ್ವಾಮಿ ಹೆಸರು ಸೇರಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪಂಪ, ರನ್ನ, ಪೊನ್ನ,ಜನ್ನ, ಕುಮಾರಸ್ವಾಮಿ ಮುಂತಾದವರು ಭಾಷೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಭಾಷಣದಲ್ಲಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ. ತಮ್ಮ ತಪ್ಪು ಸುಧಾರಿಸಿಕೊಳ್ಳದೇ ಮತ್ತೆ  ಮಾತು ಮುಂದುವರೆಸಿದ ಪ್ರಸಂಗವೂ ನಡೆಯುತು.

ಮತ್ತೊಂದಡೆ ಚಿತ್ರದುರ್ಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಚಿವ ಶ್ರೀರಾಮುಲು ಅವರೂ ಯಡವಟ್ಟು ಮಾಡಿಕೊಂಡಿದ್ದು, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಹೆಸರು ಹೇಳುವ ಸಂದರ್ಭದಲ್ಲಿ ಮಾಸ್ತಿ ಅವರ ಹೆಸರು ಬದಲು ಮಸ್ತಿ ಎಂದು ಹೇಳಿದ್ದಾರೆ. ಕಳೆದ ಬಾರಿ  ಸ್ವಾತಂತ್ರೋತ್ಸವ ದಿನಾಚರಣೆ ದಿನದಂದೂ ಕೂಡ ಸಚಿವ ಶ್ರೀರಾಮುಲು ಸಾಮಾಜಿಕ ನ್ಯಾಯ ಎನ್ನುವ ಬದಲು ಸಾಮಾಜಿಕ ನಾಯಿ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ