Breaking News

ರಾಮನಗರ: ಕರ್ತವ್ಯ ವೇಳೆಯಲ್ಲೇ ‘ಗುಂಡು’ ಹಾಕಿದ ಎಎಸ್‌ಐ; ಮೂವರು ಸಸ್ಪೆಂಡ್‌!

Spread the love

ರಾಮನಗರ: ಕರ್ತವ್ಯದಲ್ಲಿದ್ದ ವೇಳೆಯಲ್ಲೇ ಪಾನಮತ್ತರಾಗಿ ಸಾರ್ವಜನಿಕರೊಂದಿಗೆ ಕಿರಿಕ್​ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಎಸ್​ಐ ಸೇರಿ ಮೂವರು ಪೊಲೀಸರನ್ನು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ಶುಕ್ರವಾರ ಅಮಾನತು ಮಾಡಿದ್ದಾರೆ.

ಮಾಗಡಿ ಪೊಲೀಸ್​ ಠಾಣೆಯ ಎಎಸ್​ಐ ಮಂಜುನಾಥ್​ ಕೆ.ಎನ್​., ಡಿಸಿಆರ್​ಬಿ ಘಟಕದ ಎಎಸ್​ಐ ಗೋವಿಂದಯ್ಯ ಜಿ.ಎಸ್​ ಮತ್ತು ಚನ್ನಪಟ್ಟಣ ಪುರ ಪೊಲೀಸ್​ ಠಾಣೆ ಹೆಡ್‌ ಕಾನ್​ಸ್ಟೆಬಲ್​ ನಾರಾಯಣ ಮೂರ್ತಿ ಅಮಾನತುಗೊಂಡಿದ್ದಾರೆ.

ಮೈಮೇಲೆ ಪ್ರಜ್ಞೆ ಇಲ್ಲದೇ ಯೂನಿಫಾರ್ಮ್ ಕಳಚಿಟ್ಟಿದ್ದು, ನಂತರ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪಗಳ ಮೇರೆಗೆ ಅಮಾನತು ಮಾಡಲಾಗಿದೆ. ಮದ್ಯದ ಅಮಲಿನಲ್ಲಿದ್ದ ಪೊಲೀಸರು ಕಾರಿನಲ್ಲಿ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸಾರ್ವಜನಿಕರನ್ನೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ನಿಂದಿಸಿದ ಪೊಲೀಸರ ಕಾರನ್ನು ಸಾರ್ವಜನಿಕರು ಹಿಂಬಾಲಿಸಿ, ಅಡ್ಡಗಟ್ಟಿದ್ದಾರೆ. ಪೊಲೀಸರನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಆಗಲೂ ಪೊಲೀಸರು ಅಮಲಿನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲ ದೃಶ್ಯವನ್ನು ಸಾರ್ವಜನಿಕರು ತಮ್ಮ ಮೊಬೈಲ್​ನಲ್ಲಿ ವೀಡಿಯೋ ಮಾಡಿದ್ದಾರೆ. ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ.


Spread the love

About Laxminews 24x7

Check Also

ಲೋಕಾ ಇನ್ಸ್​ಪೆಕ್ಟರ್​ ಸಜೀವ ದಹನ

Spread the loveಧಾರವಾಡ: ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಕಾರು ಧಗಧಗ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ