ಬೆಳಗಾವಿ: ಜಿಲ್ಲೆಯಲ್ಲಿ ಗುರುವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆ ಸುಗಮವಾಗಿ ನಡೆದಿದ್ದು, ನಗರದ ಕೇಂದ್ರವೊಂದರಲ್ಲಿ ಕನ್ನಡ ವಿಷಯದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿ ಡಿಬಾರ್ ಮಾಡಲಾಗಿದೆ.
1,668 ವಿದ್ಯಾರ್ಥಿಗಳು ಗೈರು: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 42 ಕೇಂದ್ರಗಳಲ್ಲಿ ಕನ್ನಡ ವಿಷಯ ಪರೀಕ್ಷೆ ನಡೆಯಿತು.
ನೋಂದಾಯಿಸಿಕೊಂಡಿದ್ದ 14,489 ವಿದ್ಯಾರ್ಥಿಗಳ ಪೈಕಿ 13,883 ವಿದ್ಯಾರ್ಥಿಗಳು ಹಾಜರಾದರು. 606 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿಲ್ಲ.
ಚಿಕ್ಕೋಡಿಯಲ್ಲಿ 53 ಕೇಂದ್ರಗಳಲ್ಲಿ ನಡೆದ ಕನ್ನಡ ವಿಷಯ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 24,035 ವಿದ್ಯಾರ್ಥಿಗಳ ಪೈಕಿ 22,976 ವಿದ್ಯಾರ್ಥಿಗಳು ಹಾಜರಾದರು. 1,059 ವಿದ್ಯಾರ್ಥಿಗಳು ಗೈರುಹಾಜರಾದರು. ಅರೇಬಿಕ್ ವಿಷಯಕ್ಕೆ ನೋಂದಾಯಿಸಿಕೊಂಡಿದ್ದ 23 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಹಾಜರಾದರು. ಮೂವರು ಗೈರಾದರು.
‘ಜಿಲ್ಲೆಯಲ್ಲಿ ಮೊದಲ ದಿನದಂದು ಪಿಯು ಪರೀಕ್ಷೆ ಗೊಂದಲ ರಹಿತವಾಗಿ ನಡೆದಿದೆ. ಎಲ್ಲಿಯೂ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ’ ಎಂದು ಬೆಳಗಾವಿ ಡಿಡಿಪಿಯು ಎಂ.ಎಂ.ಕಾಂಬಳೆ, ಚಿಕ್ಕೋಡಿ ಡಿಡಿಪಿಯು ಪಿ.ಐ.ಭಂಡಾರೆ ಪ್ರತಿಕ್ರಿಯಿಸಿದರು.