ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದಲ್ಲಿ ನವ ಕರ್ನಾಟಕ ಮಾನವ ಹಕ್ಕುಗಳ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿ ತಾಲೂಕಾ ಘಟಕ ಹುಕ್ಕೇರಿ ಮತ್ತು ಗ್ರಾಮ ಪಂಚಾಯಿತಿ ಸಾರಾಪುರ ಇವರ ವತಿಯಿಂದ ಸರಪುರ್ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು
ಘಟಪ್ರಭಾದ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಲ್ರಾದ ಡಾಕ್ಟರ್ ಜೆಕೆ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಆಯುರ್ವೇದವು ಪ್ರಾಚೀನ ಕಾಲದಿಂದ ಬಂದಿರುವಂತ ಸಂಗತಿ ಈಗಲೂ ಕೂಡ ಅತ್ಯಂತ ಪ್ರಭಾವ ಶಕ್ತಿಯಾಗಿ ಈ ಭೂಮಿಯ ಮೇಲೆ ನಿಂತಿರುತ್ತದೆ
ಕೇಂದ್ರ ಸರ್ಕಾರವು ಕೂಡ ಹೆಚ್ಚಿನ ಮಹತ್ವ ನೀಡಿದೆ ತಾವುಗಳು ಕೂಡ ಆಯುರ್ವೇದ ಮಹತ್ವ ತಿಳಿದುಕೊಂಡು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಹೋಗಬೇಕು ಎಂದು ಡಾಕ್ಟರ್ ಜಿ ಕೆ ಶರ್ಮಾ ಗ್ರಾಮಸ್ಥರಿಗೆ ಆಯುರ್ವೇದ ಬಗ್ಗೆ ತಿಳಿಸಿದರು ಈ ಸಂದರ್ಭದಲ್ಲಿ ಗ್ರಾಮಸ್ಥರು ಈ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡು ಉಚಿತವಾಗಿ ಆಯುರ್ವೇದ ಔಷಧಗಳನ್ನು ಪಡೆದುಕೊಂಡರು
ನವ ಕರ್ನಾಟಕ ಮಾನವ ಹಕ್ಕುಗಳ ಕಾರ್ಯಕರ್ತರು ಉತ್ಸಾಹದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು ನವ ಕರ್ನಾಟಕ ಮಾನವ ಹಕ್ಕುಗಳ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಟೀಲ್.
ಉಪಾಧ್ಯಕ್ಷರಾದ ನಾಗಪ್ಪ ಮಾಲದಿನ್ನಿ .ಕಾರ್ಯಧ್ಯಕ್ಷರು ಸಂಜಯ್ ಕಾಂಬಳೆ. ಗೌರವಾನ್ವಿತ ಅಧ್ಯಕ್ಷರು ವಿಜಯಕುಮಾರ್ ಪರಿಟ್ .ಸಂಘಟನಾ ಕಾರ್ಯದರ್ಶಿ ಮಾರುತಿ ಕಾಂಬಳೆ.
ಸಂಚಾಲಕರು ಬಾಹುಬಲಿ ಪಾಟೀಲ್. ಸಾರಾಪುರ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಂತೋಷ ಕಬ್ಬುಗೋಳ. ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.