Breaking News

ಪೊಲೀಸ್ ಇನ್ಸ್ ಪೆಕ್ಟರ್ ಗೆ ಮ್ಮಂತವರನ್ನ ಬಹಳ ಜನ ನೋಡಿದ್ದೇನೆ.ಬಟ್ಟೆ ಬಿಚ್ಚಿಟ್ಟು ಮನೆಗೆ ಹೋಗಿ ಎಂದ ಹಿಂದೂ ಕಾರ್ಯಕರ್ತ

Spread the love

ಹುಬ್ಬಳ್ಳಿ: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಕ್ವಾರ್ಟರ್ಸ್ ನಲ್ಲಿ ನಡೆದ ಕಳ್ಳತನ ಪ್ರಕರಣ ಸಂಬಂಧ ಪೊಲೀಸರಿಗೆ ಹಿಂದು ಸಂಘಟನೆಯ ಕಾರ್ಯಕರ್ತನೊಬ್ಬ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಆವಾಜ್‌ ಹಾಕಿದ್ದಾನೆ.

ಸದ್ಯ ಮಲ್ಲಿಕಾರ್ಜುನ್ ಸತ್ತಿಗೇರಿ ಎಂಬ ಹಿಂದು ಸಂಘಟನೆಯ ಕಾರ್ಯಕರ್ತ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಇನ್ಸ್‌ ಪೆಕ್ಟರ್‌ ಮಹಾಂತೇಶ ಹೊಳಿಗೆಗೆ ಆವಾಜ್‌ ಹಾಕಿದ್ದಾನೆ.

 

ಅಂದ ಹಾಗೇ ಹುಬ್ಬಳ್ಳಿ ವಿದ್ಯಾನಗರದ ಕಿಮ್ಸ್ ಆಸ್ಪತ್ರೆಯ ವಸತಿ ಗೃಹದಲ್ಲಿ ಸರಣಿ ಕಳ್ಳತನ ನಡೆದಿತ್ತು.ಈ ಸಂಬಂಧ ಇನ್ಸ್‌ ಪೆಕ್ಟರ್‌ ಮಹಾಂತೇಶ ಹೊಳಿಗೆ ಮತ್ತವರ ಸಿಬ್ಬಂದಿ ಪರಿಶೀಲನೆ ಮಾಡಲು ಮುಂದಾಗಿತ್ತು.

ಈ ವೇಳೆ ಕಾರ್ಯಕರ್ತ ಮಲ್ಲಿಕಾರ್ಜುನ್ ಸತ್ತಿಗೇರಿ, ಏಕವಚನದಲ್ಲೇ ಪೊಲೀಸ್ ಇನ್ಸ್ ಪೆಕ್ಟರ್ ಗೆ ನಿನಗೆ ಏನು ಮಾಡಿಕೊಳ್ಳೋಕೆ ಆಗಲ್ಲ.ನಿಮ್ಮಂತವರನ್ನ ಬಹಳ ಜನ ನೋಡಿದ್ದೇನೆ.ನಿಮ್ಮ ಕೈಯಲ್ಲಿ ಏನೂ ಮಾಡೋಕೆ ಸಾಧ್ಯವಿಲ್ಲ.ಬಟ್ಟೆ ಬಿಚ್ಚಿಟ್ಟು ಮನೆಗೆ ಹೋಗಿ ಎಂದು ಪೊಲೀಸರ ಜೊತೆ ವಾಗ್ವಾದಕ್ಕಿಳಿದು ಆವಾಜ್ ಹಾಕಿದ್ದಾನೆ.


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುತಿಯುತ್ತಿರವ ಮಳೆಯಿಂದ ಮನೆ ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ .

Spread the love ಹುಬ್ಬಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುತಿಯುತ್ತಿರವ ಮಳೆಯಿಂದ ಮನೆ ಬಿದ್ದಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ