ನವದೆಹಲಿ,ಜು.6- ರಾಹುಲ್ ಗಾಂಧಿ ಅವರು ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದು ಸಭೆಯಲ್ಲೂ ಭಾಗವಹಿಸುವುದಿಲ್ಲ, ಜವಾಬ್ದಾರಿಯುತ ಪ್ರತಿಪಕ್ಷದ ನಾಯಕ ಏನು ಮಾಡಬಾರದೋ ಅದನ್ನೇ ಅವರು ಮಾಡುತ್ತಿದ್ದಾರೆ. ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸಿ ರಾಷ್ಟ್ರವನ್ನು ನಿರಾಶೆಗೊಳಿಸಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಚೀನಾ-ಭಾರತದ ಗಡಿ ವಿವಾದ ಕುರಿತು ರಾಹುಲ್ ಗಾಂಧಿ ಸರ್ಕಾರದ ವಿರುದ್ಧದ ಆಕ್ರಮಣಕಾರಿ ಪ್ರಶ್ನೆ ಮುಂದುವರಿಸುತ್ತಿದ್ದಂತೆ, ಇದನ್ನೇ ಗುರಿಯಾಗಿಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ನಾಯಕ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಯ ಒಂದೇ ಒಂದೂ ಸಭೆಯಲ್ಲೂ ಭಾಗವಹಿಸದೆ ಸೈನ್ಯದ ಬಗ್ಗೆ ಪ್ರಶ್ನಿಸುತ್ತಿದ್ದಾರೆ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದೆ.
ರಾಹುಲ್ ಗಾಂಧಿ ಆ ಅದ್ಭುತ ರಾಜವಂಶದ ಸಂಪ್ರದಾಯಕ್ಕೆ ಸೇರಿದವರಾಗಿದ್ದಾರೆ, ಇಲ್ಲಿ ರಕ್ಷಣೆಗೆ ಸಂಬಂಧಿಸಿದಂತೆ, ಸಮಿತಿಗಳು ಅಪ್ರಸ್ತುತವಾಗುತ್ತದೆ, ಆಯೋಗಗಳು ಮಾತ್ರ ಮಾಡುತ್ತವೆ.
ಕಾಂಗ್ರೆಸ್ ಸಂಸತ್ತಿನ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಅನೇಕ ಅರ್ಹ ಸದಸ್ಯರನ್ನು ಹೊಂದಿದೆ. ಆದರೆ ಒಂದು ರಾಜವಂಶವು ಅಂತಹ ನಾಯಕರನ್ನು ಬೆಳೆಯಲು ಎಂದಿಗೂ ಬಿಡುವುದಿಲ್ಲ. ನಿಜವಾಗಿಯೂ ಇದು ದುಃಖಕರ ವಿಷಯ ಎಂದಿದ್ದಾರೆ.ಕಾಂಗ್ರೆಸ್ ನಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬರದಿದ್ದರೂ, ಭಾರತೀಯ ಮತ್ತು ಚೀನಾದ ಸೇನೆಗಳ ನಡುವೆ ನಿರಂತರ ನಿಲುವು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ, ಕೇಂದ್ರ ಸರ್ಕಾರದ ಬಗ್ಗೆ ಆಕ್ಷೇಪವೆತ್ತಿ ಈ ಮೂಲಕ ಸಶಸ್ತ್ರ ಪಡೆಗಳ ಶೌರ್ಯದ ಬಗ್ಗೆ ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.