ಬೆಂಗಳೂರು: ಪೈಲೆಟ್ ಅನುಪಸ್ಥಿತಿಯಿಂದಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಮಂಗಳೂರು ಪ್ರವಾಸವನ್ನು ರದ್ದುಗೊಳಿಸಿದ ಬೆಳವಣಿಗೆ ಬುಧವಾರ ನಡೆದಿದೆ. ಇದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. “ಮಧ್ಯಾಹ್ನ ಮಂಗಳೂರಿಗೆ ತೆರಳಬೇಕಿತ್ತು.
ಆದರೆ, ಪೈಲೆಟ್ ಒಬ್ಬರು ಬಾರದ ಕಾರಣ ವಿಮಾನ ಮೇಲೇರಲಿಲ್ಲ’ ಎಂದು ಮೂಡುಬಿದಿರೆ ಕಾರ್ಯಕ್ರಮದಲ್ಲಿ ಸಿಎಂ ಹೇಳಿದರು.
ಆದರೆ ಅಧಿಕಾರಿಗಳ ಮೂಲದ ಪ್ರಕಾರ ತಾಂತ್ರಿಕ ಸಮಸ್ಯೆ ಉಂಟಾಗಿದ್ದರಿಂದ ವಿಮಾನ ಮೇಲೇರದೆ ಸಿಎಂ ನಂತರ ಪ್ರತ್ಯೇಕ ಹೆಲಿಕ್ಯಾಪ್ಟರ್ ಮೂಲಕ ಮೂಡುಬಿದಿರೆಗೆ ತೆರಳುವಂತಾಯಿತು ಎನ್ನಲಾಗಿದೆ.