ಜಿಲ್ಲೆಯಲ್ಲಿ ನಡೆಯಲಿರುವ ವಿಧಾನಪರಿಷತ್ ಚುನಾವಣೆಗೆ ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್ ವೆಂಕಟೇಶಕುಮಾರ್ ತಿಳಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪರಿಷತ್ ಚುನಾವಣೆಗೆ ಈಗಾಗಲೇ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 8875 ಮರದಾರರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇನ್ನು ಚುನಾವಣೆಗೆ 511 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು ಪ್ರತಿ ಗ್ರಾಮ ಪಂಚಾಯತ ಹಾಗೂ ನಗರ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿಯೂ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇನ್ನು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ ಎಂದು ತಿಳಿಸಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಚಿಕ್ಕೋಡಿಗೆ ಕೌಂಟಿಂಗ್ ಸ್ಥಳಾಂತರ ಮಾಡಿರುವ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮತ ಎಣಿಕೆ ಮಾಡುವ ದಿನಗಳಂದು ಬೆಳಗಾವಿಯಲ್ಲಿ ಅಧಿವೇಶನ ಇರುವುದರಿಂದ ಮತ ಎಣಿಕೆಯನ್ನು ಚಿಕ್ಕೋಡಿಯಲ್ಲಿ ನಡೆಸಲು ಅನುಮತಿ ನೀಡಬೇಕೆಂದು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಚುನಾವಣಾ ಆಯೋಗ ಆದೇಶ ನೀಡಿದರೆ ಚಿಕ್ಕೋಡಿಯಲ್ಲಿಯೇ ಕೌಂಟಿಂಗ್ ಮಾಡಲಾಗುವುದು. ಎಲ್ಲಿಯೂ ಕೂಡ ಎಲ್ಲಾ ವ್ಯವಸ್ಥೆ ಇದೆ ಎಂದರು.
ಇನ್ನು ಈಗಾಗಲೇ ಜಿಲ್ಲಾಡಳಿತ ಅಧಿವೇಶನ ಹಾಗೂ ಪತಿಷತ್ ಚುನಾವಣೆಯನ್ನು ನಡೆಸಲು ಸನ್ನದ್ಧವಾಗಿದೆ. ಇನ್ನು ಅಧಿವೇಶನವಿದ್ದಾಗ ಪರಿಷತ್ ಚುನಾವಣಾ ಮತ ಎಣಿಕೆ ಬರುವುದರಿಂದ ಎರಡನ್ನೂ ಸನ್ನದ್ಧವಾಗಿ ಎದುರಿಸಲು ಕಾರ್ಯಪ್ರವೃತ್ತವಾಗಿದೆ. ಇನ್ನು ಎರಡೂ ಸುಸೂತ್ರವಾಗಿ ನಡೆಯಲಿ ಎನ್ನುವುದು ಎಲ್ಲರ ಆಶಯ.
Laxmi News 24×7