ಚೆನ್ನೈ,- ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾನಗಾರುಡಿಗ ಎಸ್.ಪಿ. ಬಾಲಸುಬ್ರಮಣ್ಯಂರ ಸ್ಥಿತಿ ಇನ್ನೂ ಗಂಭೀರವಾಗಿಯೇ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಕೊರೊನಾ ಸೋಂಕಿನಿಂದ ಬಳಲುತ್ತಿರುವ ಎಸ್‍ಪಿಬಿ ಅವರಿಗೆ ಶ್ವಾಸಕೋಶದ ಸಮಸ್ಯೆಯೂ ಇರುವುದರಿಂದ ಅವರಿಗೆ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಆದರೂ ದಿನೇ ದಿನೇ ಅವರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ, ವೆಂಟಿಲೇಟರ್ ಇಲ್ಲದೆ ಅವರಿಗೆ ಚಿಕಿತ್ಸೆ ಕೊಡಲು ಪ್ರಯತ್ನಪಟ್ಟೆವಾದರೂ ಅವರ ದೇಹ ಅದಕ್ಕೆ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ
ವೆಂಟಿಲೇಟರ್ ಇಲ್ಲದೆ ಎಸ್‍ಪಿಬಿ ಅವರು ಉಸಿರಾಡಲು ಕಷ್ಟವಾಗುತ್ತಿರುವುದರಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇರುವುದರಿಂದ ನಿನ್ನೆ ಅವರ ಹೆಲ್ತ್ ಬುಲೆಟೆನ್ ಬಿಡುಗಡೆಯಾಗದೆ ಇರುವುದರಿಂದ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ.