ಅಕ್ಟೋಬರ್ 29 ರ ಶುಕ್ರವಾರದಂದು ಹೃದಯಾಘಾತದಿಂದ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಮರಣವು ಇಡೀ ಕರ್ನಾಟಕಕ್ಕೆ ಆಘಾತವನ್ನುಂಟು ಮಾಡಿದೆ. ಕೇವಲ 46 ವರ್ಷ ವಯಸ್ಸಿನ ನಟ, ಶುಕ್ರವಾರ ಜಿಮ್ ಗೆ ಹೋಗುವ ಮೊದಲು ಕೊಂಚ ಸುಸ್ತಿನ ಬಗ್ಗೆ ಬಗ್ಗೆ ಹೇಳಿಕೊಂಡಿದ್ದರು ಮತ್ತು ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ.
ಪುನೀತ್ ರಾಜ್‌ಕುಮಾರ್ ಫಿಟ್‌ನೆಸ್ ಮತ್ತು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕುರಿತು ಯಾವಾಗಲೂ ಹೆಚ್ಚಿನ ಕಾಳಜಿ ವಹಿಸುತ್ತಿದ್ದರು.
ಅಪ್ಪು 2017 ರಲ್ಲಿ ಬೆಂಗಳೂರಿನ ಶ್ರೀ ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ‘ಅಕಾಲಿಕ ಹೃದಯಾಘಾತವನ್ನು ತಡೆಗಟ್ಟುವ’ ಕಾರ್ಯಕ್ರಮದ ರಾಯಭಾರಿ ಸಹ ಆಗಿದ್ದರು. ಪುನೀತ್ ಅವರ ಕುಟುಂಬದ ಹಲವು ಸದಸ್ಯರು ಹೃದಯಾಘಾತದ ಹಿನ್ನೆಲೆ ಹೊಂದಿದ್ದು, 2006 ರಲ್ಲಿ ಕನ್ನಡದ ಐಕಾನ್ ಡಾ ರಾಜ್‌ಕುಮಾರ್ ಕೂಡ ಹೃದಯಾಘಾತದಿಂದಲೇ ನಿಧನರಾಗಿದ್ದರು. ಪುನೀತ್ ಅವರ ಹಿರಿಯ ಸಹೋದರ ಶಿವ ರಾಜ್‌ಕುಮಾರ್ ಕೂಡ 2015 ರಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು.
ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾಗುತ್ತಿರುವ ಯುವಜನರ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತವು ಪರಿಧಮನಿ ಹಾಗೂ ಅಪಧಮನಿಗಳಲ್ಲಿನ ಅಡೆತಡೆಗಳಿಂದ ಉಂಟಾಗುತ್ತದೆ, ಇದು ರಕ್ತವನ್ನು ಸ್ನಾಯುಗಳಿಗೆ ಹರಿಯದಂತೆ ತಡೆಯುತ್ತದೆ ಮತ್ತು ಅದರಿಂದ ಆಮ್ಲಜನಕವು ಸ್ನಾಯುಗಳಿಗೆ ಹೋಗದಂತೆ ತಡೆಯುತ್ತದೆ. ಒಂದು ವೇಳೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಹೋದರೆ ಹೃದಯಾಘಾತವು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
ಹೃದಯಾಘಾತಕ್ಕೆ ಕಾರಣವಾಗುವ ಸಾಮಾನ್ಯ ಅಂಶಗಳೆಂದರೆ ಬೊಜ್ಜು, ಧೂಮಪಾನ, ಅನಾರೋಗ್ಯಕರ ಜೀವನಶೈಲಿ.
ಹೆಚ್ಚಿನ ತೀವ್ರತೆಯ ವ್ಯಾಯಾಮ ಮತ್ತು ಜಿಮ್ ಕೂಡ ಹೃದಯದ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಇವುಗಳನ್ನು ನಿಯಮಿತವಾಗಿ ಅಭ್ಯಾಸ ಮಾಡುವುದು ಉತ್ತಮ ಎಂದು ವೈದ್ಯರು ಹೇಳುತ್ತಾರೆ.
“ತೀವ್ರವಾದ ವ್ಯಾಯಾಮದ ಕಾರಣ, ಹೃದಯದ ಆರೋಗ್ಯ ಕ್ಷೀಣಿಸಬಹುದು, ನೀವು ವ್ಯಾಯಾಮ ಮಾಡುವಾಗ ನಿಮ್ಮ ಬೈಸೆಪ್‌ಗಳು ಹೇಗೆ ದೊಡ್ಡದಾಗುತ್ತವೆ. ಹೃದಯಕ್ಕೂ ಅದೇ ಸಂಭವಿಸಬಹುದು. ನಮ್ಮ ಹೃದಯ ಸ್ನಾಯುಗಳ ಸಹ ದಪ್ಪವಾಗಬಹುದು” ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಹೃದಯ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಕ ಡಾ.ದೇವಾನಂದ್ ಎನ್‌ಎಸ್ ಹೇಳುತ್ತಾರೆ.
ಹೈಪರ್ಟ್ರೋಫಿಕ್ ಕಾರ್ಡಿಯೊಮಿಯೊಪತಿ ಎಂದು ಕರೆಯಲ್ಪಡುವ ಒಂದು ಸ್ಥಿತಿಯೂ ಇದೆ, ಇದು ಹೃದಯ ಸ್ನಾಯು ಅಸಹಜವಾಗಿ ದಪ್ಪವಾಗಲು ಕಾರಣವಾಗುವ ಅನುವಂಶೀಯ ಸಮಸ್ಯೆಯಾಗಿದ್ದು, ರಕ್ತದ ಹರಿವನ್ನು ಇದು ಕಷ್ಟಕರವಾಗಿಸುತ್ತದೆ. ಈ ಸ್ಥಿತಿಯು ಹಠಾತ್ ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.
ಜಯದೇವ ಸಂಸ್ಥೆಯ ಡಾ.ಸಿ.ಎನ್.ಮಂಜುನಾಥ್ ಕೂಡ ಇದರ ಬಗ್ಗೆ ಮಾತನಾಡಿ ನಿಯಮಿತ ವ್ಯಾಯಾಮಕ್ಕಿಂತ ಅನಿಯಮಿತ ವ್ಯಾಯಾಮ, ಅಂದರೆ ಸ್ವಲ್ಪ ಹೊತ್ತು ಕುಳಿತುಕೊಳ್ಳುವುದು ಮತ್ತು ನಂತರ ಇದ್ದಕ್ಕಿದ್ದಂತೆ ತೀವ್ರವಾದ ವ್ಯಾಯಾಮದಲ್ಲಿ ತೊಡಗುವುದು ಹೃದಯಕ್ಕೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು.
ಇದು ಒಂದೇ ಅಂಶವು ಹೃದಯಾಘಾತಕ್ಕೆ ಕಾರಣ ಎಂದು ಹೇಳಲಾಗುವುದಿಲ್ಲ. ತೀವ್ರವಾದ ವ್ಯಾಯಾಮ ಸಹ ಹೃದಯಾಘಾತಕ್ಕೆ ಒಂದು ಕಾರಣವಾಗಬಹುದು ಎಂದು ಅವರು ಹೇಳಿದರು.
ಮಂಜುನಾಥ್ ಅವರ ಪ್ರಕಾರ, ಜಯದೇವ ಸಂಸ್ಥೆಗೆ ಬರುವ ಹೃದ್ರೋಗಿಗಳಲ್ಲಿ ಕನಿಷ್ಠ 30% ರಷ್ಟು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಮತ್ತು ಕಳೆದ 5-6 ವರ್ಷಗಳಲ್ಲಿ ಕಿರಿಯ ಜನರಲ್ಲಿ ಹೃದಯಾಘಾತದ ಪ್ರಕರಣಗಳಲ್ಲಿ ಸುಮಾರು 20% ಹೆಚ್ಚಳವನ್ನು ಕಂಡಿದ್ದಾರೆ.
ಸಂಸ್ಥೆಯು 2017 ಮತ್ತು 2019 ರ ನಡುವೆ 2,000 ರೋಗಿಗಳ ಮೇಲೆ ನಡೆಸಿದ ಅಧ್ಯಯನದ ಪ್ರಕಾರ, ಹೃದಯಾಘಾತದಿಂದ ಬಳಲುತ್ತಿರುವ 30% ಯುವಜನರು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ ಮುಂತಾದ ಯಾವುದೇ ಅಪಾಯಕಾರಿ ಅಂಶಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.