ಕೊಚ್ಚಿ: ತಂದೆಯ ಜತೆಗೆ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ತೆರಳಲು ಅಪ್ರಾಪ್ತ ವಯಸ್ಕ ಬಾಲಕಿಗೆ ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಕಳೆದ ವರ್ಷ ಇದೇ ಮಾದರಿಯ ಪ್ರಕರಣದಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿ ಇದೇ ತೆರನಾದ ತೀರ್ಪು ನೀಡಿತ್ತು. ಜತೆಗೆ ಕೇರಳ ಸರಕಾರ ಲಸಿಕೆ ಪಡೆದವರ ಜತೆಗೆ ದೇಗುಲಗಳಿಗೆ ಭೇಟಿ ನೀಡಬಹುದು ಎಂಬ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕಿಯ ಪ್ರವೇಶಕ್ಕೆ ಅನುಮತಿ ನೀಡಿದೆ.
ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಒಂಬತ್ತು ವರ್ಷದ ಬಾಲಕಿ ಆ.23ರಂದು ದೇಗುಲ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಳು.
Laxmi News 24×7