ಹೈದರಾಬಾದ್: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ.
ಪೆನ್ನಾ ನದಿ ಪಾತ್ರದಲ್ಲಿ ದೇವಾಲಯ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.ದೇಗುಲದ ಗೋಪುರ ಕಾಣಿಸಿಕೊಂಡಿದ್ದು,
ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೋಪುರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಮರಳಿನಲ್ಲಿ ಹುದುಗಿರುವ ದೇವಾಲಯ ತೆಗೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.