ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 37 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 56 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 454 ಪ್ರಕರಣಗಳು ಸಕ್ರಿಯವಾಗಿವೆ.
ಜಿಲ್ಲೆಯಲ್ಲಿ ಒಟ್ಟು 2224 ಮಂದಿಗೆ ಸೋಂಕು ತಗುಲಿತ್ತು. ಇವರಲ್ಲಿ 1726 ಮಂದಿ ಗುಣಮುಖರಾಗಿದ್ದಾರೆ. 44 ಮಂದಿ ಮೃತಪಟ್ಟಿದ್ದಾರೆ. 20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 172 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಒಟ್ಟು 136 ಮಂದಿ ಹೋಂ ಐಸೋಲೇಷನ್‌ಗೊಳಗಾಗಿ ಗುಣಮುಖರಾಗಿದ್ದಾರೆ.

ಶುಕ್ರವಾರ 491 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಇದರಲ್ಲಿ ಆರ್‌ಟಿಪಿಸಿಆರ್ ವಿಧಾನದಲ್ಲಿ 396 ಮಾದರಿಗಳನ್ನೂ, ರ್ಯಾಪಿಡ್ ಆಂಟಿಜೆನ್ ಮಾದರಿಯಲ್ಲಿ 95 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಆರ್‌ಟಿಪಿಸಿಆರ್ ವಿಧಾನದಲ್ಲಿ 32, ರ್ಯಾಟ್‌ನಲ್ಲಿ 4 ಪಾಸಿಟಿವ್ ಫಲಿತಾಂಶ ಬಂದಿವೆ.
ಇಂದಿನ ಪ್ರಕರಣಗಳು -37
ಇಂದು ಗುಣಮುಖ -56
ಒಟ್ಟು ಗುಣಮುಖ -1726
ಇಂದಿನ ಸಾವು -00
ಒಟ್ಟು ಸಾವು -44
ಸಕ್ರಿಯ ಪ್ರಕರಣಗಳು -454
ಒಟ್ಟು ಸೋಂಕಿತರು -2224
Laxmi News 24×7