ಚಿಕ್ಕೋಡಿ: ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. ಕಲ್ಲಪ್ಪ ಪರಗೌಡರ (70 ) ಮೃತ ದುರ್ದೈವಿ.
ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ಮನೆ ಗೋಡೆಗಳು ಮಳೆ ನೀರಿನಿಂದ ಶಿಥೀಲಗೊಂಡಿದ್ದವು. ನಿನ್ನೆಯೂ ಭಾರೀ ಮಳೆಯಾದ ಹಿನ್ನೆಲೆ ಗೋಡೆ ಕುಸಿದು, ನಿದ್ದೆಯಲ್ಲಿದ್ದ ಕಲ್ಲಪ್ಪ ಪರಗೌಡರ ಅವರ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.