Breaking News

Uncategorized

ಕಾರಿಗೆ ಲಾರಿ ಡಿಕ್ಕಿಕಾರು ನುಜ್ಜುಗುಜ್ಜಾಗಿದ್ದು, ಬೆಂಗಳೂರು ಮೂಲದ ನಂಬರಿನ ಕಾರು ಎಂಬುದು ತಿಳಿದು ಬಂದಿದೆ.

ಅಮರಾವತಿ: ತಿರುಪತಿಯಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ತಿರುಪತಿಯ ಚಂದ್ರಗಿರಿ ಮಂಡಲದ ನೇಂಡ್ರಗುಂಟನಲ್ಲಿ ನಡೆದಿದೆ. ಮೃತ ಮಹಿಳೆಯರಲ್ಲಿ ಇಬ್ಬರು ಕರ್ನಾಟಕದ ನಂಗಿಲಿ ಪ್ರದೇಶವದವರೆಂದು ಗುರುತಿಸಲಾಗಿದೆ. ಇನ್ನೋರ್ವ ಮಹಿಳೆ ಬಂಗಾರುಪಾಲೆಂನ ನಿವಾಸಿಯಾಗಿದ್ದಾರೆ. ಕಾರು ಮತ್ತು ಲಾರಿಯ ನಡುವೆ ಸಂಭವಿಸಿದ ಅತಘಾದಲ್ಲಿ ಈ ಮೂವರು ಸಾವನ್ನಪ್ಪಿದ್ದಾರೆ. ಮೂವರು ಮಹಿಳೆಯರು ತಿರುಮಲ ವೆಂಕಟೇಶ್ವರನ ದರ್ಶನ ಪಡೆದು ಕಾರಿನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಮೃತ …

Read More »

ಹೊಸವೈರಸ್ ಬಗ್ಗೆ ಯಾವುದೇ ಘೋಷಣೆ ಮಾಡದಂತೆ ರಾಜ್ಯಗಳಿಗೆ ಕೇಂದ್ರದಿಂದ ಕಟ್ಟಪ್ಪಣೆ

ಬೆಂಗಳೂರು,ಡಿ.26- ಬ್ರಿಟನ್‍ನಲ್ಲಿ ರೂಪಾಂತರಗೊಂಡ ಹೊಸ ಸ್ವರೂಪದ ಕೊರೊನಾ ವೈರಸ್ ಕಾಣಿಸಿಕೊಂಡರೂ ಅದನ್ನು ಅಧಿಕೃತವಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ಕಟ್ಟಪ್ಪಣೆ ವಿಧಿಸಿದೆ.  ಯಾವುದೇ ವ್ಯಕ್ತಿಗೆ ಹೊಸ ಮಾದರಿಯ ಸೋಂಕು ವರದಿಯಲ್ಲಿ ಖಚಿತವಾದರೆ ಅದನ್ನು ತಕ್ಷಣವೇ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್‍ಗೆ) ಕಳುಹಿಸಿಕೊಡಬೇಕೆಂದು ಸೂಚನೆ ನೀಡಿದೆ. ಸ್ವತಃ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳೇ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆ ಅಧಿಕಾರಿಗಳ ಜೊತೆ ದೂರವಾಣಿ …

Read More »

FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ

FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡು ನಿಯಮಾನುಸಾರ ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ …

Read More »

ಅಸಲಿ-ನಕಲಿ ದೇಶಭಕ್ತರು ಯಾರು ಎಂಬುದ್ದನ್ನು ಜನರು ತೀರ್ಮಾನ ಮಾಡುತ್ತಾರೆ: ಸತೀಶ್ ಜಾರಕಿಹೊಳಿ

ಗೋಕಾಕ: ಇತಿಹಾಸದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಬಿಜೆಪಿ ಪಕ್ಷವು ದೇಶದ ಇತಿಹಾಸವನ್ನು ತಿರುಚುವ ಮೂಲಕ ಜನರನ್ನು ದಾರಿ ತಪ್ಪಿ ಸುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ಸಮುದಾಯವು ಸಮಾನತೆ ಹಾಗೂ ಪ್ರೀತಿಯಿಂದ ಬಾಳುತ್ತಿದೆ. ಆದರೆ ಬಿಜೆಪಿಯು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ದೇಶದಲ್ಲಿನ ಶಾಂತಿ ಕದಡಲು ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಗೋಕಾಕನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …

Read More »

ಸ್ಯಾಂಡಲ್‍ವುಡ್ ಮತ್ತೊಬ್ಬ ನಿರ್ದೇಶಕನ್ನು ಬಲಿ ಪಡೆದ ಕೊರೊನಾ..!

ಬೆಂಗಳೂರು, ಡಿ.25- ಕೊರೊನಾ ಮಾರಿಯು ಸ್ಯಾಂಡಲ್‍ವುಡ್ ಅನ್ನು ಬೆಂಬಿಡದಂತೆ ಕಾಡುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ದೇಶಕ ಭರತ್ (45) ನಿನ್ನೆ ರಾತ್ರಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ಮೋಹಕ ತಾರೆ ರಮ್ಯಾ ಅಭಿನಯದ ಕಂಠಿ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರ ಪಯಣ ಆರಂಭಿಸಿದ ರಾಮನಗರ ಚಿಕ್ಕಮುಳುವಾಡಿ ಗ್ರಾಮದ ಭರತ್ ಹೊಸ ಸಿನಿಮಾದ ತಯಾರಿಯಲ್ಲಿರುವಾಗಲೇ ತಮ್ಮ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ನಿರ್ದೇಶನದ …

Read More »

ಐತಿಹಾಸಿಕ ಯೆಲ್ಲೂರ್ ಕೋಟೆ ಅಥವಾ ಯಳ್ಳೂರುಗಡ ವಿಹಂಗಮ ನೋಟ

ನೀವು ಪ್ಯಾರಿಸ್‌ನಲ್ಲಿರುವಾಗ, ಬೃಹತ್ ಐಫೆಲ್ ಟವರ್ ನಗರದ ಯಾವುದೇ ಭಾಗದಿಂದ ಗೋಚರಿಸುತ್ತದೆ, ಮುಖ್ಯವಾಗಿ ಅದರ ಗಾತ್ರ ಮತ್ತು ಭವ್ಯವಾದ ನೋಟದಿಂದಾಗಿ. ಬೆಲಗವಿಯಲ್ಲಿರುವ ಯೆಲ್ಲೂರ್ ಗ್ಯಾಡ್ (ಸ್ಥಳೀಯ ಭಾಷೆಯಲ್ಲಿ ಸಣ್ಣ ಕೋಟೆಗಳನ್ನು ಕರೆಯಲಾಗುತ್ತದೆ), ಎತ್ತರದಲ್ಲದಿದ್ದರೂ, ನಗರದ ಎಲ್ಲಾ ಭಾಗಗಳಿಂದಲೂ ಇದೇ ರೀತಿ ಗೋಚರಿಸುತ್ತದೆ, ನೀವು ಅದನ್ನು ಪಶ್ಚಿಮ ತುದಿಯಿಂದ ಗೋವಾದ ಕಡೆಗೆ ಹೋಗುವಾಗ ಅಥವಾ ಪೂರ್ವ ತುದಿಯಲ್ಲಿ ನೋಡುತ್ತೀರಾ? ಹುಬ್ಬಳ್ಳಿ ಕಡೆಗೆ ನಿಮ್ಮ ದಾರಿಯಲ್ಲಿ. ಮತ್ತು ಅದು ಸಂಭವಿಸಿದಂತೆ, ನಗರದಲ್ಲಿ ಇನ್ನೂ …

Read More »

ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ ಗ್ರಾ. ಪಂ. ಚುನಾವಣೆಯಲ್ಲಿ   ಅವಿರೋಧವಾಗಿ ಆಯ್ಕೆಯಾದ ಸದಸ್ಯರನ್ನು ಶಾಸಕ ಆನಂದ ಮಾಮನಿ ಸನ್ಮಾನ.

ಸವದತ್ತಿ– ಸವದತ್ತಿ ಯಲ್ಲಮ್ಮ ಮತಕ್ಷೇತ್ರದಲ್ಲಿ 2020 ರ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆಯಲ್ಲಿ   ಅವಿರೋಧವಾಗಿ ಆಯ್ಕೆಯಾದ ಬಿ.ಜೆ.ಪಿ ಬೆಂಬಲಿತ ಗ್ರಾಮ ಪಂಚಾಯತಿಯ 32 ಸದಸ್ಯರನ್ನು ಶಾಸಕ ಆನಂದ ಮಾಮನಿ ಸನ್ಮಾನಿಸಿದರು.  ಸವದತ್ತಿ ನಗರದ ಶ್ರೀ ಎಸ್.ಜಿ.ಶಿಂತ್ರಿ ಆಂಗ್ಲಮಾಧ್ಯಮ ವಿದ್ಯಾಲಯದ ಚಂದ್ರಶೇಖರ ಮಾಮನಿ ಸಭಾಭವನದಲ್ಲಿ ಆಯೋಜಿಸಿದ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸವದತ್ತಿ ಪುರಸಭೆ ಸದಸ್ಯರು,  ಮತಕ್ಷೇತ್ರದ ಬಿ.ಜೆ.ಪಿ ಮುಖಂಡರು, ಮಹಿಳಾ ಮೋರ್ಚಾ ಅಧ್ಯಕರು, ಯುವಮೋರ್ಚಾ …

Read More »

ಸುರೇಶ ಅಂಗಡಿ ಪುತ್ರಿ ಹಾಗೂ ಸಚಿವ ಜಗದೀಶ ಶೆಟ್ಟರ್ ಸೊಸೆಯಾಗಿರುವ ಶ್ರದ್ಧಾ ಶೆಟ್ಟರ್ ರಾಜಕೀಯದಲ್ಲಿ ಸಕ್ರಿಯ ನಮಗೆ ಟಿಕೆಟ್ ಕೊಡುವಂತೆ ಲಾಭಿ ಆರಂಭಿಸಿದ್ದಾರೆ.

ಬೆಳಗಾವಿ(ಡಿ.25): ಕೇಂದ್ರ ಸಚಿವ ಸುರೇಶ ಅಂಗಡಿ ಅಕಾಲಿಕ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ  ತೆರವು ಆಗಿದೆ. ಈ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಈಗಾಗಲೇ ಆಯೋಗ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಸರತ್ತುಆರಂಭವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಲ್ಲಿ 20ಕ್ಕೂ ಹೆಚ್ಚು ಆಕಾಂಕ್ಷಿಗಳು ಪೈಪೋಟಿ ನಡೆಸುತ್ತಿದ್ದಾರೆ. ಇದೀಗ ದಿ. ಸುರೇಶ ಅಂಗಡಿ ಪುತ್ರಿ ಹಾಗೂ ಸಚಿವ ಜಗದೀಶ ಶೆಟ್ಟರ್ ಸೊಸೆಯಾಗಿರುವ ಶ್ರದ್ಧಾ ಶೆಟ್ಟರ್ …

Read More »

ರೋಗಿ ಕುಟುಂಬಸ್ಥರು, ಆಸ್ಪತ್ರೆ ನಡುವೆ ಹಗ್ಗಜಗ್ಗಾಟ; ಸಚಿವ ಸುಧಾಕರ್ ಮಧ್ಯ ಪ್ರವೇಶದ ಬಳಿಕ ಮೃತದೇಹ ಹಸ್ತಾಂತರ

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹ ಹಸ್ತಾಂತರ ವಿಷಯದಲ್ಲಿ ಕಗ್ಗಂಟಾಗಿದ್ದ ಪ್ರಕರಣ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರ ಮಧ್ಯ ಪ್ರವೇಶದಿಂದ ಬಗೆಹರಿದಿದೆ. ರಾಜಸ್ಥಾನ ಮೂಲದ ಭೀಮರಾಮ್‌ ಪಟೇಲ್‌ ಎಂಬ ಅರವತ್ತೆರಡು ವರ್ಷದ ವ್ಯಕ್ತಿ ಮೃತಪಟ್ಟಿದ್ದು ಹೆಚ್ಚುವರಿ ಬಿಲ್‌ ಪಾವತಿ ವಿಷಯದಲ್ಲಿ ಕುಟುಂಬ ಸದಸ್ಯರು ಮತ್ತು ಜಯನಗರದಲ್ಲಿರುವ ಮಣಿಪಾಲ್‌ ಆಸ್ಪತ್ರೆ ಆಡಳಿತ ಸಿಬ್ಬಂದಿ ನಡುವೆ ಹಗ್ಗಜಗ್ಗಾಟ ನಡೆದಿತ್ತು. ಮಾತ್ರವಲ್ಲ, ನಲವತ್ತು ದಿನಗಳ ಚಿಕಿತ್ಸೆ ಪಡೆದರೂ ಕೊರೋನಾ ಸೋಂಕು ನಿವಾರಣೆ ಆಗಲಿಲ್ಲ, ಆದರೂ ದೊಡ್ಡ …

Read More »

ಕಬ್ಬನ್ನು ಸಾಗಿಸಲು ಎತ್ತಿನ ಗಾಡಿಗಳನ್ನು ಬಳಸುವ ಮೂಲಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವ ಪದ್ಧತಿಗೆ ಕಡಿವಾಣ ಹಾಕಬೇಕೆಂದ ಡಾ.ಸೋನಾಲಿ ಸರ್ನೋಬತ್

, ಬೆಳಗಾವಿ– ಮಿತಿ ಮೀರಿದ ಪ್ರಮಾಣದಲ್ಲಿ ಕಬ್ಬನ್ನು ಸಾಗಿಸಲು ಎತ್ತಿನ ಗಾಡಿಗಳನ್ನು ಬಳಸುವ ಮೂಲಕ ಪ್ರಾಣಿಗಳಿಗೆ ಚಿತ್ರಹಿಂಸೆ ನೀಡುವ ಪದ್ಧತಿಗೆ ಕಡಿವಾಣ ಹಾಕಬೇಕೆಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ, ನಿಯತಿ ಫೌಂಡೇಶನ್ ಚೆರಮನ್, ಭಾರತೀಯ ಜನತಾಪಾರ್ಟಿಯ ಬೆಳಗಾವಿ ಗ್ರಾಮೀಣ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಒತ್ತಾಯಿಸಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಈ ಕುರಿತು ರಾಜ್ಯ ಪಶುಸಂಗೋಪನೆ ಸಚಿವ ಪ್ರಭು ಚೌಹ್ವಾಣ್, ಬೆಳಗಾವಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮತ್ತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ …

Read More »